ಅಂತರ್‌ಶಾಲಾ ಹಾರ್ಡ್‌ಬಾಲ್ ಕ್ರಿಕೆಟ್ ಪಂದ್ಯಾಟ

Update: 2016-05-11 18:37 GMT

ಮಣಿಪಾಲ, ಮೇ 11: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಣಿಪಾಲ ವಿವಿ ಮೈದಾನದಲ್ಲಿ ನಡೆಯುತ್ತಿರುವ ಸಾಯಿರಾಧಾ ಅಂತರ್ ಹೈಸ್ಕೂಲ್ ಹಾರ್ಡ್‌ಬಾಲ್ ಪಂದ್ಯಾಟದಲ್ಲಿ ಕುಂದಾಪುರದ ವೆಂಕಟರಮಣ, ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬ್ರಹ್ಮಾವರದ ಲಿಟ್ಲ್‌ರಾಕ್, ಹಿರಿಯಡಕದ ಗ್ರೀನ್‌ಪಾರ್ಕ್ ಶಾಲಾ ತಂಡಗಳು ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಲೀಗ್ ಹಂತದ ಪಂದ್ಯಗಳಲ್ಲಿ ಕುಂದಾಪುರದ ವೆಂಕಟರಮಣ ಹೈಸ್ಕೂಲ್, ಉಡುಪಿಯ ಸಿಲಾಸ್ ಇಂಟರ್‌ನೇಶನಲ್ ತಂಡವನ್ನು ಸೋಲಿಸಿದರೆ, ಹಿರಿಯಡ್ಕದ ಗ್ರೀನ್‌ಪಾರ್ಕ್ ಶಾಲಾ ತಂಡ, ಉಡುಪಿಯ ಇಎಂಎಚ್‌ಎಸ್ ತಂಡವನ್ನು ಪರಾಭವಗೊಳಿಸಿತು. ಉಡುಪಿಯ ವಿದ್ಯೋದಯ ಶಾಲಾ ತಂಡ ಮಂಗಳವಾರ ಅಂತಿಮ ನಾಲ್ಕರ ಹಂತ ಪ್ರವೇಶಿಸಿತ್ತು. ಸೆಮಿಫೈನಲ್ ಹಾಗೂ ಫೈನಲ್ ತಂಡಗಳು ಗುರುವಾರ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News