ಅಕ್ರಮ ಡೀಸೆಲ್ ವಶ: ಓರ್ವನ ಬಂಧನ

Update: 2016-05-12 08:30 GMT

ಉಪ್ಪಿನಂಗಡಿ, ಮೇ 12: ಅಕ್ರಮವಾಗಿ ಡೀಸೆಲ್ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಉಪ್ಪಿನಂಗಡಿ ಪೊಲೀಸರು ಪತ್ತೆಹಚ್ಚಿದ್ದು, ಓರ್ವನನ್ನು ಬಂಧಿಸಿ 175 ಲೀಟರ್ ಡೀಸೆಲ್ ವಶಕ್ಕೆ ತೆಗೆದುಕೊಂಡಿದ್ದಾರೆ.
ತೆಕ್ಕಾರು ಗ್ರಾಮದ ಚಿಂಗಾಣಿಬೆಟ್ಟು ಮನೆಯ ದಾವೂದ್ (56) ಬಂಧಿತ ಆರೋಪಿ. ಖಚಿತ ಮಾಹಿತಿಯ ಮೇರೆಗೆ ಚಿಂಗಾಣಿಬೆಟ್ಟುವಿನಲ್ಲಿರುವ ಈತನ ಮನೆಗೆ ದಾಳಿ ನಡೆಸಿದ ಪೊಲೀಸರು, ಅಲ್ಲಿ 35 ಲೀಟರ್‌ನ ಐದು ಕ್ಯಾನ್‌ಗಳಲ್ಲಿ ಅಕ್ರಮವಾಗಿ ದಾಸ್ತಾನಿಡಲಾಗಿದ್ದ 175 ಲೀಟರ್ ಡೀಸೆಲ್ ಅನ್ನು ಹಾಗೂ ಮತ್ತೊಂದು ಖಾಲಿ ಕ್ಯಾನ್ ಅನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಮಾರಾಟಕ್ಕಾಗಿ ಡೀಸೆಲನ್ನು ಇಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News