ಜೋಕಟ್ಟೆ: ಉಚಿತ ಮುಂಜಿ ಕಾರ್ಯಕ್ರಮ

Update: 2016-05-15 16:52 GMT

ಮಂಗಳೂರು, ಮೇ 15: ಪಾಪ್ಯುಲರ್  ಫ್ರಂಟ್ ಆಫ್ ಇಂಡಿಯಾ ಜೋಕಟ್ಟೆ ಮತ್ತು ಶಿಫಾ ಯುನಾನಿ ಕ್ಲಿನಿಕ್ ಇದರ ಜಂಟಿ ಆಶ್ರಯದಲ್ಲಿ ಬಡ ಮತ್ತು ನಿರ್ಗತಿಕ ಮಕ್ಕಳಿಗೆ ಉಚಿತ ಸಾಮೂಹಿಕ ಸುನ್ನತಿ (ಮುಂಜಿ) ಕಾರ್ಯಕ್ರಮ ಇಂದು ಜರಗಿತು.

ಜೋಕಟ್ಟೆ ಪರಿಸರದ ಒಟ್ಟು 15 ಮಕ್ಕಳು ಇದರ ಪ್ರಯೋಜನ ಪಡೆದುಕೊಂಡರು. ಶಿಫಾ ಕ್ಲಿನಿಕ್ನ ವೈದ್ಯ ಡಾ.ಅಶ್ಫಾಕ್ ಹುಸೈನ್ ಸಹಕರಿಸಿದರು.

ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೋಕಟ್ಟೆ ಏರಿಯಾ ಅಧ್ಯಕ್ಷ ಇಕ್ಬಾಲ್, ಕಾರ್ಯದರ್ಶಿ ಇಂತಿಯಾಝ್, ಜಿಲ್ಲಾ ಸಮಿತಿ ಸದಸ್ಯರಾದ ಹಯಾಝ್, ಮಜೀದ್ ಮತ್ತು ರಫೀಕ್ ಜೋಕಟ್ಟೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News