ಕಾಸರಗೋಡು : ಕೈ ಕೊಟ್ಟಿರುವ ವಿದ್ಯುತ್

Update: 2016-05-16 07:43 GMT

ಕಾಸರಗೋಡು, ಮೇ 16 : ಶನಿವಾರ ರಾತ್ರಿಯ ಭಾರೀ ಗಾಳಿ - ಮಳೆಗೆ  ಕೈ ಕೊಟ್ಟಿರುವ ವಿದ್ಯುತ್ ಇನ್ನೂ ಪೂರ್ಣವಾಗಿ  ಸಂಪರ್ಕ ನೀಡಿಲ್ಲ . ಇದರಿಂದ ನಗರ ಮತ್ತು ಹೊರವಲಯದ ಬಹುತೇಕ ಪ್ರದೇಶಗಳು  ಎರಡು ದಿನ ಕಗ್ಗತ್ತಳಲ್ಲೇ  ದಿನ ದೂಡುತ್ತಿದೆ.
ಮೂರನೇ ದಿನವಾದ ಇಂದು ಕೂಡಾ ವಿದ್ಯುತ್  ಸಂಪರ್ಕ  ಬಂದಿಲ್ಲ.  ಸಂಜೆಯೊಳಗೆ ಕೆಲ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ಇಲ್ಲದೆ ಇದ್ದುದರಿಂದ ಹಲವು ಎ ಟಿ ಎಂ ಗಳು ಆದಿತ್ಯವಾರ  ಸಂಜೆಯಿಂದ ಬಾಗಿಲು  ಜಡಿದಿದೆ. ಮೊಬೈಲ್ ಟವರ್ ಗಳು ಕೂಡಾ  ಬಂದ್ ಆಗಿವೆ. ಮಾತ್ರವಲ್ಲ  ಜನರು ಹಲವು ರೀತಿಯ ಸಮಸ್ಯೆಗೆ ತುತ್ತಾಗಿದ್ದಾರೆ.

ಮೊಬೈಲ್ ಚಾರ್ಚ್ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.  ಚುನಾವಣೆ ಸಂದರ್ಭವಾದುದರಿಂದ  ಸಮಸ್ಯೆ ಮತ್ತಷ್ಟು  ಹೆಚ್ಚಿಸಿದೆ.
ಮತಗಟ್ಟೆಗಳಲ್ಲಿ  ವಿದ್ಯುತ್ ಇಲ್ಲದೆ ಇರುವುದರಿಂದ  ಕ್ಯಾಂಡಲ್ ಬಳಸುವಂತಹ ಸ್ಥಿತಿ  ತಲುಪಿದೆ.
ಶನಿವಾರ ರಾತ್ರಿಯ ಭಾರಿ ಗಾಳಿ ಮಳೆಗೆ  ನಗರ  ಹಾಗೂ ಹೊರ ವಲಯದಲ್ಲಿ  ನೂರಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕಚ್ಚಿವೆ. ಟ್ರಾನ್ಸ್ ಫಾರ್ಮರ್  ಕೆಟ್ಟು ಹೋಗಿದೆ . ಇದರಿಂದ ಪೂರ್ಣ ದುರಸ್ತಿಗೆ ಒಂದು ವಾರ ಬೇಕಾದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News