ಎಸೆಸೆಲ್ಸಿ ಪ್ರತಿಭಾವಂತರು

Update: 2016-05-21 15:56 GMT

ಪ್ರವೀಣ್ ಆನಂದ್ ಕೊಪ್ಪಲ್ ಸಾಧನೆ

ಉಡುಪಿ, ಮೇ 21: ಗದಗದ ತೀರಾ ಹಿಂದುಳಿದ ಬಡ ಕುಟುಂಬದಿಂದ ಬಂದ ಪ್ರವೀಣ್ ಆನಂದ ಕೊಪ್ಪಲ್ ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.95.04 ಅಂಕಗಳನ್ನು ಗಳಿಸುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾನೆ.

ಉತ್ತರ ಕರ್ನಾಟಕದಿಂದ ಬಂದರೂ ಕರಾವಳಿಯ ಯಕ್ಷಗಾನದತ್ತ ಆಕರ್ಷಿತನಾದ ಪ್ರವೀಣ್, ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಯಕ್ಷಗಾ ವನ್ನು ಕಲಿಯುತಿದ್ದಾನೆ. ಯಕ್ಷಗಾನ ಕೇಂದ್ರದಲ್ಲಿ ಗುರುಕುಲ ಪದ್ಧತಿಯಲ್ಲಿ ಯಕ್ಷ ನಾಟ್ಯಾಭ್ಯಾಸ ನಡೆಸುವ ಪ್ರವೀಣ್, ಸುವರ್ಣರ ವಿಶೇಷ ಪ್ರಯತ್ನದಿಂದ ಇಂದ್ರಾಳಿ ಇಂಗ್ಲೀಷ್ ಮೀಡಿಯಂ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ ಈ ಬಾರಿಯ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.95 ಅಂಕಗಳನ್ನು ಗಳಿಸಿದ್ದಾನೆ.

‘ಈ ಪ್ರತಿಭಾವಂತ ಹುಡುಗ ಯಕ್ಷಗಾನ ಆಸಕಿಯಿಂದ ನಮ್ಮ ಕೇಂದ್ರ ಸೇರಿದ್ದಾನೆ. ಎರಡೂ ಕ್ಷೇತ್ರಗಳಲ್ಲಿ ಈತನ ಸಾಧನೆ ಗಮನಿಸಿ ತುಂಬಾ ಸಂತೋಷ ವಾಗಿದೆ’ ಎನ್ನುತ್ತಾರೆ ಯಕ್ಷಗಾನ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್.

----------------------------------------------------

ಬೆಳ್ತಂಗಡಿ, ಮೇ 20: ಕಲ್ಮಂಜ ದೇವರಗುಡ್ಡೆ ಶ್ರೀ ಆತ್ಮಾನಂದ ಸರಸ್ವತಿ ವಿದ್ಯಾಲಯವು ಎಸೆಸೆಲ್ಸಿಯಲ್ಲಿ ಶೇ. 94.74 ಫಲಿತಾಂಶ ಪಡೆದಿದೆ. 19 ವಿದ್ಯಾರ್ಥಿಗಳು ಹಾಜರಾಗಿದ್ದು 18 ಮಂದಿ ಉತ್ತೀರ್ಣರಾಗಿದ್ದಾರೆ. ಭಾವನ ಪಿ ನಾಯ್ಕಾ(616), ಎಂ.ಬಿ. ಪ್ರಜ್ವಲ್(571)ಅಂಕ ಪಡೆದಿದ್ದಾರೆ.

----------------------------------------------------

ಮಂಗಳೂರು, ಮೇ 20: ಬಜ್ಪೆ ಸೈಂಟ್ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ರಝಿನಾ 2016ರ ಎಸೆಸೆಲ್ಸಿ ಪರೀಕ್ಷೆಯಲ್ಲಿ 564 ಅಂಕಗಳನ್ನು ಪಡೆದು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಇಕ್ಬಾಲ್ ಮತ್ತು ಆಸಿಯಾ ದಂಪತಿಯ ಪುತ್ರಿ

......................................................................................

ಮಂಗಳೂರು, ಮೇ 19: ಕಾಪು ದಂಡತೀರ್ಥ ಇಂಗ್ಲಿಷ್ ಮೀಡಿಯಂ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕೆ. ದೀಪ್ತಿ ನಾಯಕ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 601 (96.16%) ಅಂಕ ಗಳಿಸಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕನ್ನಡ: 114, ಇಂಗ್ಲಿಷ್: 97, ಹಿಂದಿ: 97, ಗಣಿತ: 98, ವಿಜ್ಞಾನ: 96, ಸಮಾಜ: 99 ಅಂಕಗಳನ್ನು ಗಳಿಸಿರುವ ಇವರು ಕಾಪುವಿನ ಸರಿತಾ ಮಾಧವ ನಾಯಕ್ ಹಾಗೂ ಮಾಧವ ನಾಯಕ್ ದಂಪತಿಯ ಪುತ್ರಿ.

--------------------------------------------------------

ಕೃಷ್ಣಾಪುರ: ಇಲ್ಲಿನ ಚೊಕ್ಕಬೆಟ್ಟು ಅಲ್ ಬದ್ರಿಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಯೂಸುಫ್ ಶಹೀರ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 90.72(567) ಗಳಿಸಿದ್ದಾರೆ.

-------------------------------------------------------------------------------------------------------------------------------------------------------

ಶಿವಮೊಗ್ಗ:ಇಲ್ಲಿನ ಇಖ್ಲಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಆಯಿಷಾ ಸಮ್ರೀನ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 95.36(596) ಅಂಕ ಗಳಿಸಿದ್ದಾರೆ.

---------------------------------------------------------------------------------------------------------------------------------------

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೈಹಾನತ್ ಶದಾಗೆ   ಶೇಕಡಾ 80(502) ಅಂಕ

--------------------------------------------------------------------------------------------------------------------

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರೆಹನಾಝ್ ಗೆ ಶೇಕಡಾ 90.08%(563)

---------------------------------------------------------------------------------------------------------------------

ಮುರ್ಡೆಶ್ವರ ಆರ್.ಎನ್.ಎಸ್. ವಿದ್ಯಾನಿಕೇತನ 100% ಫಲಿತಾಂಶ

ಮುರ್ಡೇಶ್ವರದ ಆರ್.ಎನ್. ಶೆಟ್ಟಿ ಟ್ರಸ್ಟಿನ ಆಡಳಿತಕ್ಕೊಳಪಟ್ಟ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್ಸಿ. ಪರೀಕ್ಷೆಯಲ್ಲಿ 100% ಫಲಿತಾಂಶ ಗಳಿಸಿ ಸಾಧನೆ ಮಾಡಿದ್ದಾರೆ.
 ಪರೀಕ್ಷೆಗೆ ಹಾಜರಾದ 49 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು 90% ಕ್ಕಿಂತಲೂ ಅಧಿಕ ಅಂಕಗಳಿಸಿದ್ದಾರೆ. ಕುಮಾರಿ ಸ್ವಾತಿ ನಾಯ್ಕ 97.75% ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕುಮಾರಿ ತಂಜಿಲಾ ಮುಲ್ಲಾ 97.12% ದ್ವಿತೀಯ ಸ್ಥಾನ, ಕುಮಾರಿ ಆಶ್ರೀತಾ ನಾಯಕ ತೃತೀಯ ಸ್ಥಾನ 96.08%, ಕುಮಾರ ಲೋಹಿತ ನಾಯ್ಕ 96.32%, ಕುಮಾರ ಅಮೋಧ ಉಡುಪ 96.32% ಮತ್ತು ಕುಮಾರಿ ಮೇಘಾ ಮುರುಡೇಶ್ವರ 96.32% ಅಂಕ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಸಂಸ್ಥೆಯ ಅಧ್ಯಕ್ಷ್ಷರಾದ ಡಾ. ಆರ್.ಎನ್. ಶೆಟ್ಟಿ, ನಿರ್ದೇಶಕರಾದ ಶ್ರೀ ಎಂ.ವಿ. ಹೆಗಡೆ, ಪ್ರಾಂಶುಪಾಲರಾದ ಡಾ. ಸುರೇಶ್ ಶೆಟ್ಟಿ ಹಾಗೂ ಶಿಕ್ಷಕ, ಶಿಕ್ಷಕೇತರ ವೃಂದದವರು ಅಭಿನಂದಿಸಿದ್ದಾರೆ.

-------------------------------------------------------------------------------------------------------------------------------------------

ಈ ಬಾರಿಯಎಸ್‌ಎಸ್‌ಎಲ್‌ಸಿಪರೀಕ್ಷೆಯಲ್ಲಿಅಲ್‌ಅಝರ್‌ಇಂಗ್ಲೀಷ್‌ಮೀಡಿಯಂಸ್ಕೂಲ್‌ಹೆಜಮಾಡಿ ಇದರ ಐವರುವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ

ಮಂಗಳೂರು, ಮೇ18: ಈ ಬಾರಿಯಎಸ್‌ಎಸ್‌ಎಲ್‌ಸಿಪರೀಕ್ಷೆಯಲ್ಲಿಅಲ್‌ಅಝರ್‌ಇಂಗ್ಲೀಷ್‌ಮೀಡಿಯಂಸ್ಕೂಲ್‌ಹೆಜಮಾಡಿ ಇದರ ಐವರುವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿಯಲ್ಲಿತೇರ್ಗಡೆಯಾಗಿದ್ದಾರೆ. ಹಾಜಿರಾಅಫ್ರಿನ್(586), ಆಯಿಷಾಸಾದಿಯಾ(560), ನಫೀಸಾಶಾಹಿದ್(556), ಆಯಿಷಾತಸ್‌ಮೀಯಾ(546), ರೈಹಾನ(538) ಅಂಕಗಳಿಸಿರುತ್ತಾರೆ.

------------------------------------------------------------------------------------------------------------------------------------------------------------

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಅಜ್ಮಲ್‌ ಫರ್ವೀನ್‌ ಗೆ605 ಅಂಕ

ಪುತ್ತೂರು: ಈ ಬಾರಿಯ ಎಸ್‌ ಎಸ್‌ ಎಲ್‌ಸಿ ಪರೀಕ್ಷೆಯಲ್ಲಿ ಪಾಂಗ್ಲಾಯಿಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಜ್‌ಮಲ್‌ಫರ್ವೀನ್ 605(96.8) ಅಂಕ ಪಡೆದು ಡಿಸ್ಟಿಂಕ್ಷನ್‌ ಪಡೆದುಕೊಂಡಿದ್ದಾರೆ.

ಇಂಗ್ಲೀಷ್-116, ಕನ್ನಡ-99, ಹಿಂದಿ-99, ಗಣಿತ99, ವಿಜ್ಷಾನ-98 ಮತ್ತುಸಮಾಜ ವಿಜ್ಞಾನ-94 ಅಂಕ ಪಡೆದು ಕೊಂಡಿದ್ದಾರೆ. ಅಜ್‌ಮಲ್‌ ಫರ್ವೀನ್‌ ಅವರು ದರ್ಬೆನಿವಾಸಿ ಅಬ್ದುಲ್‌ರಹಿಮಾನ್‌ ಪುಚ್ಚೆತ್ತಡ್ಕಮತ್ತು ಮೈಮೂನ ದಂಪತಿಯ ಪುತ್ರಿ.

---------------------------------------------------------------------------------------------------------------------------------------

ಎಸ್. ಎಸ್. ಎಲ್. ಸಿ ಯಲ್ಲಿ ಅದ್ಭುತ ಸಾಧನೆ ಗೈದ ಸುನಿಧಿ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉಡುಪಿ ಸೈಂಟ್ ಸಿಸಿಲಿಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ಸುನಿಧಿ,601(96.16%) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ಧಾಳೆ. ಇಂಗ್ಲಿಷ್ ನಲ್ಲಿ 122, ಕನ್ನಡ 99, ಹಿಂದಿ 99,ಗಣಿತ 90, ವಿಜ್ಞಾನ93, ಸಮಾಜ ವಿಜ್ಞಾನದಲ್ಲಿ 98 ಅಂಕಗಳಿಸಿದ ಈಕೆ ಉಡುಪಿಯ ಸಂಧ್ಯಾ ಕೃಷ್ಣಮೂರ್ತಿ ಮತ್ತು ಕೃಷ್ಣಮೂರ್ತಿಯ ಕೋಡ್ಲಾ ಇವರ ಪುತ್ರಿ

----------------------------------------------------------------------------------------------------------------------

ಮೊಹಮ್ಮದ್ ಯಾಸೀನ್ ಗೆ ಶೇಕಡಾ 88.48%( 553) ಅಂಕ

ಕೈಂಕಂಬ : ಇಲ್ಲಿನ ಪೊಂಪೈ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮೊಹಮ್ಮದ್ ಯಾಸೀನ್ ಗೆ ಶೇಕಡಾ 88.48%( 553) ಅಂಕ ಗಳಿಸಿದ್ದಾರೆ.

-------------------------------------------------------------------------------------------------------------------

ಭಟ್ಕಳ: ಸನಾ ಫರ್ಹೀನ್ ಗೆ ಶೇ.93.92% ಅಂಕ

ಭಟ್ಕಳ: ಇಲ್ಲಿನ ಅಂಜುಮನ್ ನವಾಯತ್ ಕಾಲೋನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸನಾ ಫರ್ಹೀನ್ ಶೇಖ್ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 587(ಶೇ.93.92%) ಅಂಕ ಪಡೆಯುವುದರ ಮೂಲಕ ಉನ್ನತ ಶ್ರೇಣಿಯಲ್ಲಿ 97 ಅಂಕಗಳನ್ನು ಗಳಿಸಿಕೊಂಡಿದ್ದಾರೆ.

 ಸನಾ ಫರ್ಹೀನ್ ಇಲ್ಲಿನ ಪ್ರತಿಷ್ಟಿತ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಅಧಿಕಾರಿಯಾಗಿರುವ ದಾವೂದ್ ಉಸ್ಮಾನ್ ಶೇಖ ಹಾಗೂ ಶಮ್ಸುನ್ನಿಸಾ ದಂಪತಿಗಳ ಪುತ್ರಿಯಾಗಿದ್ದಾರೆ. 

-------------------------------------------------------------------------------------------------------------------

ಭಟ್ಕಳ: ಆನಂದಾಶ್ರಮ ಪ್ರೌಢಶಾಲೆಯ ಜಿಬ್ರಾನ್ ಆಹಮದ್ ಗೆ ಶೇ.96.45% ಅಂಕ

ಭಟ್ಕಳ: ಇಲ್ಲಿನ ಆನಂದಾಶ್ರಮ ಪ್ರೌಢಶಾಲೆಯ ವಿದ್ಯಾರ್ಥಿ ಜಿಬ್ರಾನ್ ಆಹಮದ್ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.45% ಅಂಕಗಳನ್ನು ಪಡೆಯುವುದರ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ. ಇಂಗ್ಲಿಷ್ ವಿಷಯದಲ್ಲಿ 119, ಕನ್ನಡದಲ್ಲಿ 99, ಹಿಂದಿಯಲ್ಲಿಯಲ್ಲಿ 100, ಗಣಿತದಲ್ಲಿ 95, ವಿಜ್ಞಾನದಲ್ಲಿ 92, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾನೆ.

ಜಿಬ್ರಾನ್ ಆಹಮದ್ ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜೇಸಾಬ್ ಹಾಗೂ ಅಂಜುಮನ್ ಪಿ.ಯು.ಕಾಲೇಜಿನ ಉಪನ್ಯಾಸಕಿ ವಾಹಿದಾ ದಂಪತಿಗಳ ಪುತ್ರನಾಗಿದ್ದಾನೆ.

-----------------------------------------------------------------------------------------------------------------------

ಐಡಿಯಲ್  ಆಂಗ್ಲ ಮಾಧ್ಯಮ ಶಾಲೆಯ ಎಸ್.ಎಸ್.ಎಲ್.ಸಿ ಪ್ರತಿಭಾವಂತರು

-----------------------------------------------------------------------------------------------------------------------------

ಮಂಗಳೂರು, ಮೇ 18: ಬಿ. ಅಹ್ಮದ್ ಇಸ್ಮಾಯಿಲ್ ಮತ್ತು ಝೀನತ್ ದಂಪತಿಯ ಪುತ್ರಿ, ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಲೆಡಿಹಿಲ್ ವಿದ್ಯಾರ್ಥಿನಿ ರಿಝಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 576 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

.......................................................................

ಬಂಟ್ವಾಳದ ಹನ್ನತ್‌ಗೆ 568 ಅಂಕಗಳು

ಮಂಗಳೂರು, ಮೇ 17: ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ 568 ಅಂಕಗಳನ್ನು ಪಡೆದು, ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈಕೆ ಕನ್ನಡ ಭಾಷಾ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದಿದ್ದಾರೆ. ಈಕೆ ಬಂಟ್ವಾಳ ತಾಲೂಕಿನ ಮಂಚಿಯ ಅಬ್ದುಲ್ ಹಮೀದ್ ಮತ್ತು ಝೈನಬಾ ದಂಪತಿಯ ಪುತ್ರಿ.

--------------------------------------------------

ಮೂಡುಬಿದಿರೆ, ಮೇ 17: ಸ್ವಾಮಿ ಮುಕ್ತಾನಂದ ಪರಮಹಂಸ ಪ್ರೌಢಶಾಲೆ ಬೆಳುವಾಯಿ ಇಲ್ಲಿನ ವಿದ್ಯಾರ್ಥಿನಿ ಎಸ್.ಎನ್.ಅನುಷಾ ಜೈನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 579 (ಶೇ.93) ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಒಟ್ಟು ಹಾಜರಾದ 46 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶೇ.85 ಫಲಿತಾಂಶ ದಾಖಲಾಗಿದೆ.

ಈಕೆ ಬೆಳುವಾಯಿ ಪದ್ಮಶ್ರೀ ಹೌಸ್‌ನ ಸುದರ್ಶನ್ -ನಾಗರತ್ನ ಜೈನ್ ದಂಪತಿಯ ಪುತ್ರಿ.

------------------------------------------------------

ಕನ್ನಡ ಮಾಧ್ಯಮದ ವಿದ್ಯಾರ್ಥಿಗೆ 614 ಅಂಕ 

ರಜೆಯಲ್ಲಿ ದುಡಿಮೆ, ಸಾಧನೆಗೆ ಅಡ್ಡಿಯಾಗದ ಬಡತನ

ಬಂಟ್ವಾಳ, ಮೇ 17: ಬಂಟ್ವಾಳ ಪುರಸಭಾ ವ್ಯಾಪ್ತಿಯ ಮುಗ್ಡಾಲ್‌ಗುಡ್ಡೆ ನಿವಾಸಿ ಭೋಜ ಪೂಜಾರಿ ಎಂಬವರ ಪುತ್ರ ಶಶಾಂತ್ ಕಡು ಬಡತನದ ನಡುವೆಯೂ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 614 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಂಟ್ವಾಳ ಎಸ್‌ವಿಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಯಾಗಿರುವ ಶಶಾಂತ್‌ನ ತಂದೆ ಭೋಜ ಪೂಜಾರಿ ಕೂಲಿ ಕಾರ್ಮಿಕನಾಗಿದ್ದು, ತಾಯಿ ವನಿತಾ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದಾರೆ. ಇದರಿಂದಾಗಿ ಈ ವಿದ್ಯಾರ್ಥಿ ಬೇಸಿಗೆ ರಜೆಯಲ್ಲಿ ವಿವಿಧ ಹೊಟೇಲ್‌ನಲ್ಲಿ ಕೆಲಸ ಮಾಡುವ ಮೂಲಕ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಸರಿದೂಗಿಸುತ್ತಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಕ್ಕೆ ವಿಜ್ಞಾನ ವಿಭಾಗ ಆಯ್ದುಕೊಂಡು ಉಪನ್ಯಾಸಕನಾಗಬೇಕು ಎಂಬ ಹಂಬಲ ಶಶಾಂತ್ ವ್ಯಕ್ತಪಡಿಸಿದ್ದಾರೆ.

ಶೇ. ನೂರು ಫಲಿತಾಂಶ: ಬಂಟ್ವಾಳ ಎಸ್‌ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 82 ವಿದ್ಯಾರ್ಥಿಗಳ ಪೈಕಿ 32 ಮಂದಿಗೆ ಎ+ ಮತ್ತು 22 ಮಂದಿಗೆ ಎ ಗ್ರೇಡ್ ದೊರೆತು ಶಾಲೆಯು ಶೇ. 100 ಫಲಿತಾಂಶ ದಾಖಲಿಸಿದೆ.

ತಾಲೂಕಿನ ವಗ್ಗ ಸರಕಾರಿ ಪ್ರೌಢಶಾಲೆಯ ಒಟ್ಟು 43 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇ. 100 ಫಲಿತಾಂಶ ದಾಖಲಿಸಿದ್ದಾರೆ.

ಇನ್ನೊಂದೆಡೆ ನಯನಾಡು ಸರಕಾರಿ ಪ್ರೌಢಶಾಲೆಯ ಒಟ್ಟು 38 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇ. 100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ.

ತಾಲೂಕಿನ ಪಾಣೆಮಂಗಳೂರು ಎಸ್‌ಎಲ್‌ಎನ್‌ಪಿ ವಿದ್ಯಾಲಯದಲ್ಲಿ ಒಟ್ಟು 50 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆ ಹೊಂದಿ ಶೇ. 100 ಫಲಿತಾಂಶ ಸಾಧಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿನಿ ತೃಪ್ತಿ ನಾಯಕ್ 617 ಅಂಕ ಪಡೆದು ಗಮನ ಸೆಳೆದಿದ್ದಾರೆ. ತಾಲೂಕಿನ ತುಂಬೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಟ್ಟು 46ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗಿ ಶೇ. 100 ಫಲಿತಾಂಶ ದಾಖಲಿಸಿದ್ದಾರೆ.

.............................................................

ಹೊಸಬೆಟ್ಟುವಿನ ರಮ್ಯಶ್ರೀ ಮಂಗಳೂರಿಗೆ ಪ್ರಥಮ

ಮಂಗಳೂರು, ಮೇ 16: ಎಸೆಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್‌ವಿದ್ಯಾದಾಯಿನಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಹೊಸಬೆಟ್ಟುವಿನ ರಮ್ಯಶ್ರೀ ಮಂಗಳೂರು ತಾಲೂಕಿನಲ್ಲಿ ಮೊದಲನೆ ಸ್ಥಾನವನ್ನು ಪಡೆದಿದ್ದಾರೆ.
 
ರಮ್ಯಶ್ರೀ 625 ಅಂಕಗಳಲ್ಲಿ 623ಅಂಕಗಳನ್ನು ಪಡೆದಿದ್ದಾರೆ. ಸಂಸ್ಕೃತದಲ್ಲಿ 125,ಇಂಗ್ಲೀಷ್‌ನಲ್ಲಿ 99, ಕನ್ನಡದಲ್ಲಿ 99,ಗಣಿತದಲ್ಲಿ 100, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 100 ಅಂಕಗಳನ್ನು ಪಡೆದಿದ್ದಾರೆ.

ಈಕೆ ಸುರತ್ಕಲ್ ಹೊಸಬೆಟ್ಟುವಿನ ರಮೇಶ್ ರಾವ್ ಮತ್ತು ಮೀರಾ ದಂಪತಿಯ ಪುತ್ರಿ. ವಿದ್ಯಾಭ್ಯಾಸದೊಂದಿಗೆ ಚೆಸ್ ಕ್ರೀಡೆಯಲ್ಲಿ ಆಸಕ್ತಿಯಿರುವ ಇವರು ಚೆಸ್ ಪಂದ್ಯಾಟದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದರು.

-----------------------------------

ಅಲೋಶಿಯಸ್ ವಿದ್ಯಾರ್ಥಿ ಸೋಹಾನ್ ಕೋಟ್ಯಾನ್‌ಗೆ 622 ಅಂಕ

ಮಂಗಳೂರು, ಮೇ 16: ನಗರದ ಕೊಡಿಯಾಲ್‌ಬೈಲಿನ ಸಂತ ಅಲೋಶಿಯಸ್ ಶಾಲೆಯ ವಿದ್ಯಾರ್ಥಿ ಸೋಹನ್ ಎಸ್. ಕೋಟ್ಯಾನ್ 622 ಅಂಕ ಗಳಿಸಿದ್ದಾರೆ.

ಉಳ್ಳಾಲ ಮೊಗವೀರಪಟ್ಣದ ಅಶೋಕ್ ಕೋಟ್ಯಾನ್‌ರ ಪುತ್ರ ಸೋಹನ್ ಎಸ್. ಕೋಟ್ಯಾನ್ ಇಂಗ್ಲೀಷ್‌ನಲ್ಲಿ 123, ಕನ್ನಡದಲ್ಲಿ 100, ಹಿಂದಿಯಲ್ಲಿ 100 ,ಗಣಿತ 100, ವಿಜ್ಞಾನದಲ್ಲಿ 100, ಸಮಾಜ ವಿಜ್ಞಾನದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ಸೋಹನ್ ಎಸ್. ಕೋಟ್ಯಾನ್ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ.

------------------------------------

ಮಂಗಳೂರು, ಮೇ 16: ಎಸೆಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮರಿಯಮ್ ರೆನಿಶ್ ಬಸ್ತಿಕಾರ್ 615 ಅಂಕಗಳನ್ನು ಪಡೆದುಕೊಂಡಿದ್ದಾರೆ.

ಅಂಕಗಳ ವಿವರ

ಕನ್ನಡ 123, ಇಂಗ್ಲೀಷ್ 98, ಹಿಂದಿ 99, ಗಣಿತ 97, ವಿಜ್ಞಾನ 98 ಮತ್ತು ಸಮಾಜ ವಿಜ್ಞಾನ 100.

ಈಕೆ ಅಜೀಝ್ ಬಸ್ತಿಕಾರ್ ಮತ್ತು ಮನೊಳಿ ಆಯಿಷಾ ಬೇಬಿ ದಂಪತಿಯ ಪುತ್ರಿ ಹಾಗೂ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ.

----------------------------------------------

ಉಡುಪಿ, ಮೇ 16: ಇಲ್ಲಿನ ಉಚ್ಚಿಲ ಮಹಾಲಕ್ಷ್ಮಿ ಇಂಗ್ಲೀಷ್ ಮೀಡಿಯಂ ಶಾಲೆಯ ವಿದ್ಯಾರ್ಥಿ ಅಲ್ತಮಿಶ್ ಅಹ್ಮದ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 564 ಅಂಕಗಳನ್ನು ( 90 ಶೇ ) ಪಡೆದಿದ್ದಾರೆ. ಈತ ಮೂಳೂರಿನ ಫಕೀರ್ ಅಹ್ಮದ್ ಹಾಗು ಮೈಮುನ ದಂಪತಿಯ ಸುಪುತ್ರ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News