ಕೃಷ್ಣಾಪುರ: ತಮಾಮ್ ಅಪಾರ್ಟ್‌ಮೆಂಟ್‌ಗೆ ಶಿಲಾನ್ಯಾಸ

Update: 2016-05-16 18:51 GMT

ಮಂಗಳೂರು, ಮೇ 16: ಮಂಗಳೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದ್ದು,ಮಹಾನಗರ ಪಾಲಿಕೆಯ 60 ವಾರ್ಡ್‌ಗಳಲ್ಲಿ 23 ವಾರ್ಡ್‌ಗಳು ನನ್ನ ಕ್ಷೇತ್ರದಲ್ಲಿದೆ. ನಗರದ ಸರ್ವ ತೋಮುಖ ಅಭಿವೃದ್ಧಿಗೆ ವಿಶಾಲವಾದ ನೀಲಿ ನಕ್ಷೆಯೊಂದಿಗೆ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಸ್ತೆ, ವಿದ್ಯುತ್, ನೀರು ಇಂತಹ ಮೂಲಭೂತ ಸೌಕರ್ಯ ಗಳೊಂದಿಗೆ ಸ್ಟೇಡಿಯಂ, ಮಕ್ಕಳ ಪಾರ್ಕ್, ಸುಸಜ್ಜಿತ ಮಾರುಕಟ್ಟೆ, ಆರೋಗ್ಯ ಕೇಂದ್ರ ಮುಂತಾದ ಸವಲತ್ತುಗಳು ನಿರ್ಮಿಸಲ್ಪ ಡುವುದರೊಂದಿಗೆ ಸುರತ್ಕಲ್ ಪರಿಸರ ಮಾದರಿ ಉಪನಗರವಾಗಿ ರೂಪುಗೊಳ್ಳಲಿದೆ. ಈ ಪ್ರದೇಶದಲ್ಲಿ ತಮಾಮ್ನಂತಹ ಸುಸಜ್ಜಿತ ವಸತಿ ಸಂಕೀರ್ಣಗಳು ನಿರ್ಮಾಣವಾಗು ತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಬಿ.ಎ. ಮೊಯ್ದಿನ್ ಬಾವ ಹೇಳಿದ್ದಾರೆ. ಸುರತ್ಕಲ್ ಸಮೀಪ ಕೃಷ್ಣಾಪುರದಲ್ಲಿ ನಿರ್ಮಾಣವಾಗ ಲಿರುವ ‘ತಮಾಮ್’ ಅಪಾರ್ಟ್‌ಮೆಂಟ್‌ಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತಾಡುತ್ತಿದ್ದರು.
4 ಮಹಡಿಗಳ ತಮಾಮ್ ಅಪಾರ್ಟ್‌ಮೆಂಟ್ 30 ಸೆಂಟ್ಸ್ ವಿಶಾಲ ನಿವೇಶನದಲ್ಲಿ ನಿರ್ಮಾಣವಾಗುತ್ತಿದ್ದು, 28 ವಸತಿ ಗೃಹಗಳನ್ನು ಒಳಗೊಂಡಿರುತ್ತವೆ. 24 ಗಂಟೆ ನೀರು, ವಿದ್ಯುತ್ ಪೂರೈಕೆ ವ್ಯವಸ್ಥೆ ಇದ್ದು, ಮಕ್ಕಳ ಪಾರ್ಕ್ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಬಸ್ ನಿಲ್ದಾಣ, ಶೈಕ್ಷಣಿಕ ಸಂಸ್ಥೆಗಳು, ಆರಾಧನಾಲಯಗಳೆಲ್ಲವೂ ಅತೀ ಹತ್ತಿರದಲ್ಲಿರುವ ಈ ಅಪಾರ್ಟ್‌ಮೆಂಟ್ ಸುಂದರ ವಿನ್ಯಾಸವನ್ನು ಹೊಂದಿದ್ದು, ಮಧ್ಯಮ ವರ್ಗದ ಜನರಿಗೆ ಕೈಗೆಟಕುವ ಬೆಲೆಯನ್ನೂ ನಿಗದಿಗೊಳಿಸಲಾಗಿದೆ ಎಂದು ಸಂಸ್ಥೆಯ ಪಾಲುದಾರ ಮುಹಮ್ಮದ್ ರಫೀಕ್ ಕೃಷ್ಣಾಪುರ ವಿವರಿಸಿದರು.

 ಕೃಷ್ಣಾಪುರ ಖಾಝಿ ಅಲ್‌ಹಾಜ್ ಇ.ಕೆ.ಇಬ್ರಾಹೀಂ ಮದನಿ ದುಆ ನೆರವೇರಿಸಿದರು. ಮಂಜೇಶ್ವರದ ಬದ್ರುದ್ದೀನ್ ತಂಙಳ್ ಬ್ರೋಷರ್ ಬಿಡುಗಡೆ ಮಾಡಿದರು. ಕಾರ್ಪೊರೇಟರ್‌ಗಳಾದ ತಿಲಕ್‌ರಾಜ್, ಅಯಾಝ್, ಉಪ್ಪಳದ ಹನೀಫ್ ಗೋಲ್ಡ್ಕಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಸನಬ್ಬ ಮಂಗಳಪೇಟೆ, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಪಿ.ಉಸ್ಮಾನ್, ಬಾವಾಕ ಚೊಕ್ಕಬೆಟ್ಟು, ಹಮೀದ್ ಅಬಯಾಸ್, ಅಬ್ದುಲ್ ಹಮೀದ್ ಮಾವರಿ, ಇಬ್ರಾಹೀಂ ಪಿ.ಎಸ್., ಇಂಜಿನಿಯರ್ ಶಾಫಿ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರ ಮುಹಮ್ಮದ್ ರಫೀಕ್ ಸ್ವಾಗತಿಸಿದರು. ಅಬ್ಬೂ ತಮಾಮ್ ವಂದಿಸಿದರು. ಮುಬಾರಕ್ ಪಿ.ಎಸ್. ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿದರು. ಬಿ.ಎ.ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News