ಕಾಸರಗೋಡು : ಚುನಾವಣೆ ಮುಗಿದ ಬಳಿಕ ರಾಜಕೀಯ ಘರ್ಷಣೆ; ಹರತಾಳ

Update: 2016-05-17 03:55 GMT

ಕಾಸರಗೋಡು, ಮೇ 17 : ಜಿಲ್ಲೆಯಲ್ಲಿ ಚುನಾವಣೆ ಮುಗಿದ ಬಳಿಕ ವ್ಯಾಪಕ ಪ್ರಮಾಣದ ರಾಜಕೀಯ ಘರ್ಷಣೆ ಗಳು ನಡೆದಿದ್ದು , 25 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ದೇಲ೦ಪಾಡಿಯ ಎಡಪರಂಬದಲ್ಲಿ  ಬಿಜೆಪಿ ರಾಜ್ಯ ಉಪಾಧ್ಯಕ್ಷೆ  ಪ್ರಮೀಳಾ ಸಿ . ನಾಯಕ್ ರವರ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು, ಇದನ್ನು  ಪ್ರತಿಭಟಿಸಿ ಇಂದು ದೇಲ೦ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಹರತಾಳಕ್ಕೆ ಬಿಜೆಪಿ ಕರೆ ನೀಡಿದೆ.

ಬೆಳಗ್ಗೆ 6 ಗಂಟೆಗೆ ಹರತಾಳ ಆರಂಭಗೊಂಡಿದ್ದು ಸಂಜೆ 6 ತನಕ ನಡೆಯಲಿದೆ.

ಕಾಸರಗೋಡು  ಕೂಡ್ಲು ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ತಂಡವೊಂದು ಹಲ್ಲೆ ನಡೆಸಿದೆ. ಗಾಯಗೊಂಡ ಮುಹಮ್ಮದ್  ಸಿನಾನ್ ಎಂಬಾತನನ್ನು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದುಮ ಪಾಕ್ಯಾರ್ ನಲ್ಲೂ ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಹಲ್ಲೆ  ನಡೆಸಲಾಗಿದ್ದು, ಪಾಕ್ಯಾರ್ ನ ಸಿದ್ದಿಕ್ (23) ಮತ್ತು ರಂಶಾದ್ (20) ಗಾಯಗೊಂಡಿದ್ದಾರೆ.

ತೆಕ್ಕಿಲ್ ನಲ್ಲಿ ಉದುಮ ಮಾಜಿ ಶಾಸಕ  ಕೆ . ವಿ ಕುನ್ಚಿ ರಾಮನ್ ರವರ ಮೇಲೆ ತಂಡವೊಂದು ಹಲ್ಲೆಗೆತ್ನಿಸಿದ್ದು , ಅವರು ಸಂಚರಿಸುತ್ತಿದ್ದ ವಾಹನಕ್ಕೆ ಹಾನಿ ಎಸಗಲಾಗಿದೆ. ತೆಕ್ಕಿಲ್ ಪರಂಬ  ಜಿ ಯು ಪಿ ಶಾಲಾ ಬಳಿ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News