ವಿದ್ಯುತ್ ಆಘಾತ: ಯುವಕ ಮೃತ್ಯು

Update: 2016-05-17 15:12 GMT

ಕಾರ್ಕಳ, ಮೇ 17: ಬೆಳ್ಮಣ್ಣು ಗ್ರಾಮದ ಸಾಧು ಶೆಟ್ಟಿ ಎಂಬವರ ಪುತ್ರ ಗುಣಪಾಲ ಶೆಟ್ಟಿ (24) ಎಂಬವರು ವಿದ್ಯುತ್ ಶಾಕ್ ತಗಲಿ ಮೃತಪಟ್ಟ ಘಟನೆ ಸೋಮವಾರ ಸಂಭವಿಸಿದೆ.

ಮನೆಯ ಒಳಗಡೆ ಅಳವಡಿಸಿದ ಬಲ್ಬ್‌ನಿಂದ ಮನೆಯೊಳಗಿನ ಚಾವಡಿಗೆ ಬಲ್ಬ್ ಜೋಡಿಸುವ ವೇಳೆ ವಿದ್ಯುತ್ ಸ್ಪರ್ಶವಾಗಿತ್ತು. ಪ್ರಜ್ಞೆ ತಪ್ಪಿದ ಆತನನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News