ಬಂಟ್ವಾಳ: ಬಿರುಗಾಳಿ, ಮಳೆಗೆ 35 ಕ್ಕೂ ಮನೆಗಳಿಗೆ ಹಾನಿ

Update: 2016-05-17 17:38 GMT

ಬಂಟ್ವಾಳ, ಮೇ 17: ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಬೀಸಿದ ಭಾರೀ ಬಿರುಗಾಳಿ ಹಾಗೂ ಬಳಿಕ ಸುರಿದ ಮಳೆಗೆ 35 ಮನೆಗಳಿಗೆ ಹಾನಿ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. 

ಭಾರೀ ಗಾಳಿ ಮಳೆಗೆ ತಾಲೂಕಿನ ಬಿ.ಸಿ.ರೋಡ್, ಪಾಣೆಮಂಗಳೂರು, ನರಿಕೊಂಬು, ಅಮ್ಟೂರು, ಬಂಟ್ವಾಳ, ವಿಟ್ಲದ ಬೊಬ್ಬೆಕೇರಿಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಮೆಲ್ಕಾರ್ ರಾಷ್ಟ್ರಿಯ ಹೆದ್ದಾರಿಗೆ ಮೇಲೆ ಮರವೊಂದು ಉರುಳಿಬಿದ್ದು ಕೆಲವೊತ್ತು ಟ್ರಾಪಿಕ್ ಜಾಮ್ ಕೂಡಾ ಉಂಟಾಯಿತು. 

ಮಳೆಯಿಂದ ತಾಲೂಕಿನಾದ್ಯಂತ ವಿದ್ಯುತ್ ಕಂಬಗಳೂ ಹಾನಿಗೊಂಡಿದ್ದು ತಾಲೂಕಿನಾದ್ಯಂತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ರಾತ್ರಿಯಾಗಿರುವುದರಿಂದ ದುರಸ್ಥಿ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು ಬುಧವಾರ ಬೆಳಗ್ಗಿನವರೆಗೂ ವಿದ್ಯುತ್ ಮರು ಪೂರೈಕೆಯಾಗುವುದು ಕಷ್ಟಸಾಧ್ಯವಾದೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News