ಮೇ 19ರಂದು ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ

Update: 2016-05-18 05:08 GMT

ಕಾಸರಗೋಡು, ಮೇ 18:  ಕೇರಳ  ವಿಧಾನಸಭಾ ಚುನಾವಣೆಯ ಮತ ಎಣಿಕೆ  ನಾಳೆ  ನಡೆಯಲಿದೆ . 

ಜಿಲ್ಲೆಯ ಐದು ಮತಗಟ್ಟೆ ಗಳ  ಮತ ಎಣಿಕೆ  ಎರಡು ಕೇಂದ್ರಗಳಲ್ಲಿ ನಡೆಯಲಿದೆ.

ಮಂಜೇಶ್ವರ , ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾಸರಗೋಡು ಸರಕಾರಿ ಕಾಲೇಜು ಮತ್ತು ಕಾಞಂಗಾಡ್ , ತ್ರಿಕ್ಕರಿಪುರ  ಕ್ಷೇತ್ರದ ಮತ ಎಣಿಕೆ ಕಾಞಂಗಾಡ್ ನೆಹರೂ ಕಾಲೇಜಿನಲ್ಲಿ ನಡೆಯಲಿದೆ .

ಬೆಳಗ್ಗೆ  ಎಂಟು ಗಂಟೆಗೆ ಮತ  ಎಣಿಕೆ ಆರಂಭಗೊಳ್ಳಳಿದ್ದು ,  8.30 ರ ಸುಮಾರಿಗೆ ಮೊದಲ ಸುತ್ತಿನ ಫಲಿತಾಂಶ ಹೊರಬೀಳಲಿದೆ.

11.30ರ  ಸುಮಾರಿಗೆ ಪೂರ್ಣ ಫಲಿತಾಂಶ ಹೊರಬೀಳಲಿದೆ.

ಮತ ಎಣಿಕೆ  ಹಿನ್ನಲೆಯಲ್ಲಿ  ಬಿಗು ಬಂದೋಬಸ್ತ್  ಏರ್ಪಡಿಸಲಾಗಿದೆ .

ಮೇ 16 ರಂದು ನಡೆದ ಚುನಾವಣೆಯಲ್ಲಿ  78.58 ಶೇಕಡಾ ಮತದಾನವಾಗಿತ್ತು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News