ಕಾಂಪ್ಯಾಕ್ಟ್ ಎಲ್‌ಪಿಜಿ ಆರ್‌ಎಲ್ ಆಟೊರಿಕ್ಷಾ ಅನಾವರಣ

Update: 2016-05-18 08:29 GMT


 ಮಂಗಳೂರು, ಮೇ 17: ಬಜಾಜ್ ಆಟೊ ಲಿ.ನವರು ಸುಪ್ರೀಂ ಆಟೊ ಡೀಲರ್ಸ್‌ (ಪ್ರೈ)ಲಿ.ನ ಸಹಯೋಗದೊಂದಿಗೆ ನಗರದ ಸುಪ್ರೀಂ ವರ್ಕ್ ಶಾಪ್ ಬಳಿಯ ನಂದಿಗುಡ್ಡೆ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ನೂತನ ಕಾಂಪ್ಯಾಕ್ಟ್ ಎಲ್‌ಪಿಜಿ ಆರ್‌ಎಲ್ ಆಟೊರಿಕ್ಷಾವನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅನಾವರಣ ಗೊಳಿಸಿದರು.
 ಸಮಾರಂಭದಲ್ಲಿ ಮಂಗಳೂರು ಶ್ರೀ ಲಕ್ಷ್ಮಣಾನಂದ ವಿವಿಧೋದ್ಧೇಶ ಸಹಕಾರಿ ಸಂಘದ ಲಿ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುರೇಶ್, ಸುಪ್ರೀಂ ಆಟೋ ಡೀಲರ್ಸ್‌ ಪ್ರೈ ಲಿ.ನ ಡಿಜಿಎಂ ಸುದರ್ಶನ್ ಭಟ್, ಸರ್ವಿಸ್ ವಿಭಾಗದ ಎಜಿಎಂ ಗುರುಪ್ರಸಾದ್, ಸೇಲ್ಸ್ ಮ್ಯಾನೇಜರ್ ಅಹ್ಮದ್ ಸಿದ್ದೀಕ್, ತ್ರಿಚಕ್ರ ವಿಭಾಗದ ಸೇಲ್ಸ್ ಮ್ಯಾನೇಜರ್ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

ಬಜಾಜ್ ಆಟೊ ಲಿ.ನ ಸರ್ವಿಸ್ ವಿಭಾಗದ ಏರಿಯಾ ಮ್ಯಾನೇಜರ್ ಅರುಣ್ ಗಾಯಕ್‌ವಾಡ್ ಬಜಾಜ್ ಕಾಂಪ್ಯಾಕ್ಟ್ ಎಲ್‌ಪಿಜಿ ಆರ್‌ಎಲ್ ಆಟೊರಿಕ್ಷಾದ ಬಗ್ಗೆ ಮಾಹಿತಿ ನೀಡಿದರು.
 ಇದೆ ಸಂದರ್ಭ 20 ಗ್ರಾಹಕರಿಗೆ ಆಟೋ ಕೀಗಳನ್ನು ಹಸ್ತಾಂತರಿಸಲಾ ಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News