ಮಂಗಳೂರು: ಶಿಾಲಿ ಕಾರಂತ್ ರಂಗಪ್ರವೇಶ ,

Update: 2016-05-18 13:32 GMT

ಮಂಗಳೂರು: ನಗರದ ನತ್ಯ ಭಾರತಿ ಕದ್ರಿ ನಾಟ್ಯಾಲಯದ ವಿದ್ಯಾರ್ಥಿನಿ ವಿದುಷಿ ಶಿಾಲಿ ಕಾರಂತ್ ಮೇ 21 ರಂದು ಸಂಜೆ ಪುರಭವನದಲ್ಲಿ ಭರತನಾಟ್ಯ ಮಾರ್ಗ ಪದ್ಧತಿಯಂತೆ ರಂಗಪ್ರವೇಶ ಮಾಡಲಿದ್ದಾರೆ ಎಂದು ಸಂಸ್ಥೆಯ ಗುರು ರಶ್ಮಿ ಚಿದಾನಂದ್ ಹೇಳಿದರು.

    ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಾಲಿ ತನ್ನ 5ನೇ ವಯಸ್ಸಿನಲ್ಲಿ ಪುಟ್ಟ ಹೆಜ್ಜೆಗಳೊಂದಿಗೆ ನತ್ಯ ಪ್ರಾರಂಭಿಸಿ ಭರತನಾಟ್ಯ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ಪದವಿಗಳನ್ನು ವಿಶಿಷ್ಟ ದರ್ಜೆಯಲ್ಲಿ ಪೂರೈಸಿದ್ದಾರೆ. ಶಿಾಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು, ಭರತನಾಟ್ಯದ ಪ್ರೌಢ ಪ್ರಾವೀಣ್ಯತೆಯಿಂದ ಪೂರ್ಣ ಪ್ರಮಾಣದ ಭರತನಾಟ್ಯ ಮಾರ್ಗ ಪದ್ಧತಿಯಂತೆ ರಂಗಪ್ರವೇಶ ಮಾಡಲಿದ್ದಾರೆ. ನತ್ಯಭಾರತಿ ಸಂಸ್ಥೆಯ 19ನೇ ರಂಗಪ್ರವೇಶ ಇದಾಗಿದೆ ಎಂದು ಅವರು ಹೇಳಿದರು.

ನತ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಶಿಾಲಿ ಅವರ ನತ್ಯ ಕಾರ್ಯಕ್ರಮ ನಡೆಯಲಿದೆ. ಗುರುವಂದನಾ ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಅಧ್ಯಕ್ಷ ರವಿರಾಜ ಹೆಗ್ಡೆ, ಕರ್ಣಾಟಕ ಬ್ಯಾಂಕ್‌ನ ಚ್ೀ ಜನರಲ್ ಮ್ಯಾನೇಜರ್ ಎಂ.ಎಸ್.ಮಹಾಬಲೇಶ್ವರ ಭಟ್ ಭಾಗವಹಿಸಲಿದ್ದಾರೆ. ಗುರುವಂದನೆಯ ಬಳಿಕ ನತ್ಯ ಮುಂದುವರಿಯಲಿದೆ ಎಂದರು.

ಹಿನ್ನೆಲೆ ಕಲಾವಿದರಾಗಿ ಹಾಡುಗಾರಿಕೆಯಲ್ಲಿ ಸ್ವರಾಗ್ ಮಾಹೆ, ಮದಂಗದಲ್ಲಿ ಸುರೇಶ್ ಬಾಬು ಆರ್., ಕಣ್ಣೂರು, ಕೊಳಲಿನಲ್ಲಿ ಗಣೇಶ್ ಕೆ.ಎಸ್., ಬೆಂಗಳೂರು, ಖಂಜೀರದಲ್ಲಿ ಮನೋಹರ ರಾವ್ ಪಿ., ಮಂಗಳೂರು ಇವರುಗಳು ಸಹಕರಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಡಾ.ಬಿ.ವಿ.ಸತ್ಯನಾರಾಯಣ, ಬಿ.ಸುಧಾ ರಾಣಿ, ಶಿಾಲಿ ಕಾರಂತ್, ಗುರು ಗೀತಾ ಸರಳಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News