ನಾಳೆ ಚಿತ್ರಪ್ರದರ್ಶನ

Update: 2016-05-18 18:35 GMT

ಮಂಗಳೂರು, ಮೇ 18: ನಗರದ ಬಿಜೈನಲ್ಲಿರುವ ಭಾರತ್ ಮಾಲ್‌ನ ಭಾರತ್ ಸಿನೆಮಾಸ್‌ನಲ್ಲಿ ‘ಸೈರಾತ್’ ಮರಾಠಿ ಚಲನಚಿತ್ರವು ಮೇ 20ರಿಂದ ಪ್ರದರ್ಶನಗೊಳ್ಳಲಿದೆ. ಸೈರಾತ್ ಚಲನಚಿತ್ರವು ಮರಾಠಿ ಚಿತ್ರರಂಗದ ಬಾಕ್ಸ್ ಆಫೀಸಿನಲ್ಲಿ ಗರಿಷ್ಠ ಮೊತ್ತದ ಗಳಿಕೆ ಮಾಡಿದೆ. ದ.ಕ. ಜಿಲ್ಲೆಯಲ್ಲಿ ಮರಾಠಿ ಚಲನಚಿತ್ರ ಪ್ರದರ್ಶನವಾಗುವುದು ಪ್ರಥಮವಾಗಿದ್ದು ಇದರ ಹೆಗ್ಗಳಿಕೆ ಭಾರತ್ ಸಿನೆಮಾಸ್‌ಗೆ ಸಲ್ಲುತ್ತದೆಯೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News