ಬಿಂಗ್ಹಮ್‌ಟನ್ ವಿವಿ ಜೊತೆ ‘ಮೈಟ್’ ಒಡಂಬಡಿಕೆ

Update: 2016-05-18 18:43 GMT

ಮಂಗಳೂರು, ಮೇ 18: ಮೂಡು ಬಿದಿರೆಯ ಮಿಜಾರುವಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ (ಮೈಟ್)ನ್ಯೂಯಾರ್ಕ್‌ನ ಬಿಂಗ್ಹಮ್‌ಟನ್ ಸರಕಾರಿ ವಿಶ್ವ ವಿದ್ಯಾನಿಲಯದ ಜೊತೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ಮೈಟ್ ಅಧ್ಯಕ್ಷ ರಾಜೇಶ್ ಚೌಟ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಪ್ಪಂದದ ತಿಳುವಳಿಕೆ ಪತ್ರಕ್ಕೆ ಬಿಂಗ್ಹಮ್‌ಟನ್ ವಿಶ್ವ ವಿದ್ಯಾನಿಲಯದ ಅಧ್ಯಕ್ಷ ಹಾರ್ವೆ ಸ್ಟೆಂಜರ್, ಶೈಕ್ಷಣಿಕ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ಪೋವೊಸ್ಟ್ ಡೋನಾಲ್ಡ್ ನೀಮನ್, ಮೈಟ್ ಅಧ್ಯಕ್ಷ ರಾಜೇಶ್ ಚೌಟ ಹಾಗೂ ಪ್ರಾಂಶುಪಾಲ ಈಶ್ವರ ಪ್ರಸಾದ್ ಸಹಿ ಹಾಕಿದರು.

ಥಾಮಸ್ ಜೆ. ವಾಟ್ಸ್‌ನ್ ಸ್ಕೂಲ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಅಪ್ಲೈಡ್ ಸೈನ್ಸ್‌ನ ಡೀನ್ ಕೃಷ್ಣ ಸ್ವಾಮಿ ಹರಿ ಶ್ರೀಹರಿ, ಮೈಟ್ ಮಾಹಿತಿ ವಿಜ್ಞಾನ ಹಾಗೂ ಇಂಜಿನಿಯರಿಂಗ್ ವಿಭಾಗದ ಮಂಜುನಾಥ್ ಎಚ್ ಈ ಸಂದರ್ಭ ಉಪಸ್ಥಿತರಿದ್ದರು.

ಬಿಂಗ್ಹಟಮ್ ವಿಶ್ವ ವಿದ್ಯಾನಿಲಯ ಅಮೆರಿಕಾದ 25 ಪ್ರತಿಷ್ಠಿತ ವಿಶ್ವ ವಿದ್ಯಾನಿಲಯಗಳ ಪೈಕಿ ಫೋರ್ಬ್ಸ್‌ಪ್ರಕಾರ 15 ಸ್ಥಾನದಲ್ಲಿದೆ. ಈ ಒಡಂಬಡಿಕೆಯಿಂದ ಎರಡೂ ಸಂಸ್ಥೆಗಳು ಬೋಧನೆಯಲ್ಲಿ ಸುಧಾರಣೆಯನ್ನು ತರುವುದು, ಸಂಶೋಧನಾ ಕಾರ್ಯಗಳನ್ನು ಜಂಟಿಯಾಗಿ ಕೈಗೊಳ್ಳುವುದು, ಶೈಕ್ಷಣಿಕ ಸಹಭಾಗಿತ್ವದ ಕಾರ್ಯಕ್ರಮ ಗಳನ್ನು ಜಂಟಿಯಾಗಿ ಹಮ್ಮಿಕೊಳ್ಳಲು, ವಿಸ್ತರಿಸಲು, ವಿನಿಮಯ ಮಾಡಿಕೊಳ್ಳಲು ವಿದ್ಯಾರ್ಥಿಗಳ ಜ್ಞಾನಾರ್ಜನೆಯ ದೃಷ್ಟಿಯಿಂದ ಸಂಶೋಧನಾ ಚಟುವಟಿಕೆ ಕೈಗೊಳ್ಳಲು, ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗಲಿದೆ ಎಂದು ರಾಜೇಶ್ ಚೌಟ ತಿಳಿಸಿದರು.

ಈ ಒಡಬಂಡಿಕೆಗೆ ಸಂಬಂಧಿಸಿದಂತೆ 2005ರಿಂದ ಥಾಮಸ್ ಜೆ.ವಾಟ್ಸ್‌ನ್ ಸ್ಕೂಲ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಅಪ್ಲೈಡ್ ಸೈನ್ಸ್‌ನ ಡೀನ್ ಕೃಷ್ಣ ಸ್ವಾಮಿ ಹರಿ ಶ್ರೀಹರಿಯ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.ಮೈಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಮೈಟ್ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಎರೋನಾಟಿಕಲ್ ಇಂಜಿನಿಯರಿಂಗ್, ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಮೈಟ್ ಪದವಿ ಕೋರ್ಸ್‌ಗಳನ್ನು ಹೊಂದಿದೆ.

ಈ ಕ್ಯಾಂಪಸ್‌ನಲ್ಲಿ ಬಾಶ್ ಸಂಸ್ಥೆಯ ವಿಶ್ವ ದರ್ಜೆಯ ಸಂಶೊಧನಾ ಕೇಂದ್ರ, 79 ದಶಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿದ ಸೀಮನ್ಸ್ ಶ್ರೇಷ್ಠತಾ ಕೇಂದ್ರವನ್ನು ಒಳಗೊಂಡಿದೆ.ಇನ್ಫೋಸಿಸ್ ಸಂಸ್ಥೆಯನ್ನು ಗಣನೀಯ ಕೊಡುಗೆ ನೀಡುವ ಕೇಂದ್ರವಾಗಿ ಮಾನ್ಯತೆ ಮಾಡಿದೆ ಎಂದು ಮೈಟ್ ಪ್ರಚಾರ್ಯ ಈಶ್ವರ ಪ್ರಸಾದ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News