ಮಂಗಳೂರಿನಲ್ಲಿ ಸಂಪೂರ್ಣ ಬಂದ್

Update: 2016-05-19 07:08 GMT

ಮಂಗಳೂರು, ಮೇ 19;ಎತ್ತಿನಹೊಳೆ ಯೋಜನೆ ವಿರೋಧಿಸಿ ಕರೆ ನೀಡೆಲಾಗಿದ್ದ ದ.ಕ ಜಿಲ್ಲಾ ಬಂದ್ ಕರೆಗೆ ಮಂಗಳೂರು ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 
ಮುಂಜಾನೆ ಐದು ಗಂಟೆಗೆ ಮೊದಲು ಪಂಪ್ವೆಲ್ ವೃತ್ತ, ತೊಕ್ಕೊಟ್ಟು , ಉಳ್ಳಾಲ, ಎಕ್ಕೂರಿನಲ್ಲಿ ಟಯರ್ ಗೆ ಬೆಂಕಿ ಕೊಟ್ಟು ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಲಾಯಿತು. ಕೂಡಲೆ ಪೊಲೀಸರು ಅದನ್ನು ತೆರವುಗೊಳಿಸಿದ್ದಾರೆ.
ಬಂದ್ ಕರೆಗೆ ಸ್ಪಂದಿಸಿರುವ ಬಸ್ ಚಾಲಕರು ಬಸ್ ಗಳನ್ನು ರಸ್ತೆಗಿಳಿಸಲಿಲ್ಲ. ಖಾಸಗಿ ಸರ್ವಿಸ್ ಬಸ್ ಗಳು ಮತ್ತು ಸಿಟಿ ಬಸ್ ಗಳು ರಸ್ತೆಗೆ ಇಳಿಯಲಿಲ್ಲ .
ಬೆಂಗಳೂರು, ಮೈಸೂರು ಮುಂತಾದೆಡೆಯಿಂದ ಬರುವ  ಕೆ ಎಸ್ ಆರ್ ಟಿ ಸಿ ಬಸ್ ಗಳು ಪೊಲೀಸರ ರಕ್ಷಣೆಯೊಂದಿಗೆ ಸಂಚರಿಸುತ್ತಿರುವುದು ಕಂಡುಬಂದಿದೆ. ನಗರದ ಸ್ಟೇಟ್ ಬ್ಯಾಂಕ್ ನಿಂದ ಯಾವುದೇ ಖಾಸಗಿ ಮತ್ತು ಕೆ ಎಸ್ ಆರ್ ಟಿ ಸಿ ಬಸ್ ಗಳು ಸಂಚಾರವನ್ನು ನಡೆಸಿಲ್ಲ.
ನಗರದಲ್ಲಿ ಕೆಲವೊಂದು ಅಟೋ ರಿಕ್ಷಾ ಮಾತ್ರ.  ಚಲಿಸುತ್ತಿವೆ. ಜನಸಂಚಾರವು ವಿರಳವಾಗಿದೆ. ದೂರದೂರಿನಿಂದವ ಪ್ರಯಾಣ ಮುಗಿಸಿ ಬಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದೆ.ನಗರದಲ್ಲಿ ಪೂರ್ತಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ನಗರದ ಸೆಂಟ್ರಲ್ ಮಾರುಕಟ್ಟೆ ಕೂಡ ಸಂಪೂರ್ಣ ಬಂದ್ ಆಗಿದೆ.

ನಗರದ ನಂತೂರು ಸರ್ಕಲ್ ಬಳಿ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರಿಂದ ರಸ್ತೆ ತಡೆ ನಡೆಯಿತು. ನಂತೂರು ಸರ್ಕಲ್ ನಲ್ಲಿರುವ ನಾಲ್ಕು ರಸ್ತೆಗಳಲ್ಲಿ ರಸ್ತೆ ತಡೆ ನಡೆಸಿದ ಕಾರ್ಯಕರ್ತರು ಎತ್ತಿನಹೊಳೆ ಯೋಜನೆ ವಿರುದ್ದ ಘೋಷಣೆ ಕೂಗಿದರು. ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News