ಟ್ರಾನ್ಸಿಟ್ ಒನ್ ಮಾಲ್‌ನಲ್ಲಿ 12 ಲಕ್ಷ ಶ್ರೇಣಿಯಿಂದ ಶಾಪ್‌ಗಳು ಲಭ್ಯ

Update: 2016-05-19 16:15 GMT

ಮಂಗಳೂರು, ಮೇ 19: ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಇಕೊಲಾಜಿಕಲ್ ಹ್ಯಾಬಿಟಾಟ್ಸ್ ವತಿಯಿಂದ ತೊಕ್ಕೊಟ್ಟು ರಾ.ಹೆ. 66ರ ಯುನಿಟಿ ಸಭಾಂಗಣದ ಸಮೀಪ ನಿರ್ಮಾಣವಾಗುತ್ತಿರುವ ಎ ಥೀಮ್ ಬೇಸ್ಡ್ ಮಾಲ್ ‘ಟ್ರಾನ್ಸಿಟ್ ಒನ್’ನ ಅಡಿಪಾಯದ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ಉತ್ತಮ ಗುಣಮಟ್ಟದಲ್ಲಿ ಈ ಕಾರ್ಯವನ್ನು ಕೈಗೊಳ್ಳಲಾಗಿದೆ.

ವಿವಿಧ ಸವಾಲುಗಳ ಹೊರತಾಗಿಯೂ, ಶಿಸ್ತುಬದ್ಧವಾಗಿ ಉತ್ತಮ ತಾಂತ್ರಿಕ ಪರಿಣತಿಯನ್ನು ಉಪಯೋಗಿಸಿ, ಸುಧಾರಿತ ತಂತ್ರಜ್ಞಾನದಿಂದ, ಶಾಶ್ವತ ಡಿ-ವಾಟರಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪೂರ್ವ ಯೋಜನೆ ಮತ್ತು ಕಟ್ಟಡ ಕಟ್ಟಲು ಬೇಕಾಗಿರುವ ಸಾಮಗ್ರಿಗಳ ಪೂರ್ವ ಪರೀಕ್ಷೆಯಿಂದ ಉತ್ತಮ ಗುಣಮಟ್ಟ ಮತ್ತು ಸುರಕ್ಷೆಗೆ ಹೆಚ್ಚಿನ ಗಮನ ನೀಡಲಾಗಿದೆ ಎಂದು ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

 ಪರಿಣತರಿಂದ ಅನೇಕ ರೀತಿಯ ರಚನಾತ್ಮಕ ಪರಿಶೀಲನೆ, ಮಣ್ಣು ಹಾಗೂ ನೀರಿನ ಪರೀಕ್ಷೆ, ಇಚ್ಛಿತ ಗುಣಮಟ್ಟಕ್ಕಾಗಿ ನಿರ್ಮಾಣ ಬ್ಲಾಕ್‌ಗಳ ಗುಣಮಟ್ಟವನ್ನು ವಿವಿಧ ಹಂತಗಳಲ್ಲಿ ಪರಿಶೀಲಿಸಲಾಗಿದೆ. ಕಟ್ಟಡ ತಳಪಾಯದ ಸಂದರ್ಭದಲ್ಲೇ ಮಣ್ಣು ಮತ್ತು ನೀರನ್ನು ಪರಿಶೀಲನೆ ಮಾಡುವುದು ಇಕೋಲಾಜಿಕ್ ಹ್ಯಾಬಿಟ್ಯಾಟ್ ವಿಶೇಷತೆಯಾಗಿದೆ.

ಟ್ರಾನ್ಸಿಟ್ ಒನ್ ಎಂಬ ವಿಶಿಷ್ಟ ಕಲ್ಪನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂಬುದಕ್ಕೆ ಮಾಲ್‌ನ ಅನಾವರಣಕ್ಕೆ ಮೊದಲೇ ಇದರ 3ನೆ ಮಹಡಿಯ ಎಲ್ಲಾ ಬೂಟಿಕ್ ಸ್ಟೋರ್‌ಗಳು ಮಾರಾಟವಾಗಿರುವುದು ಸಾಕ್ಷಿಯಾಗಿದೆ. ಜೂನ್ ಆರಂಭಕ್ಕೆ ಮುನ್ನ ಎರಡು ಮಹಡಿಯ ಸ್ಲಾಬ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಇಕೊಲಾಜಿಕಲ್ ಹ್ಯಾಬಿಟೆಟ್ಸ್ ಮೇ 31ರ ತನಕ ರೂ. 12 ಲಕ್ಷದ ಮಳಿಗೆಗಳ ಕೊಡುಗೆಯನ್ನು ನೀಡುತ್ತಿದ್ದು, ಇನ್ನೂ ಹಲವು ರೀತಿಯ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಲು ಗ್ರಾಹಕರು ಈ ಕೆಳಗಿನ ವಿಳಾಸಕ್ಕೆ ಕೂಡಲೇ ಸಂಪರ್ಕಿಸಬಹುದು.

 ಇಕೋಲಾಜಿಕ್ ಹ್ಯಾಬಿಟ್ಯಾಟ್ಸ್, ಕ್ರಿಸ್ಟಲ್ ಆರ್ಕ್, 3ನೇ ಮಹಡಿ, ಬಲ್ಮಠ ರಸ್ತೆ, ಹಂಪನ್‌ಕಟ್ಟ, ಮಂಗಳೂರು. ಇ-ಮೇಲ್:enquiries@ecologichabitats.com ಅಥವಾ ವೆಬ್‌ಸೈಟ್ www.ecologichabitats.comಗೆ ಭೇಟಿ ನೀಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News