ಭಟ್ಕಳ: ಶಂಕರಾಚಾರ್ಯ ಜಯಂತಿ ಅಂಗವಾಗಿ ಪ್ರವಚನ ಕಾರ್ಯಕ್ರಮ

Update: 2016-05-20 09:34 GMT

ಭಟ್ಕಳ, ಮೇ 20: ಶೃಂಗೇರಿಯ ಭಾರತೀ ತೀರ್ಥ ಸ್ವಾಮೀಜಿಯವರ ಆಶಯದಂತೆ ಶ್ರೀ ಶಂಕರಾಚಾರ್ಯ ಜಯಂತಿಯ  ಅಂಗವಾಗಿ ಭಟ್ಕಳ ತಾಲುಕಿನ ವಿವಿಧ ದೇವಾಲಯಗಳಲ್ಲಿ ಶಂಕರರ ತತ್ವಗಳ ಕುರಿತು ಪಾರಾಯಣ ಹಾಗೂ ಪ್ರವಚನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ಭಟ್ಕಳದ ಮುಗಳೀಕೋಣೆ ಗೋಪಾಲಕೃಷ್ಣ ದೇವಾಲಯದಲ್ಲಿ ಶಂಕರಾಚಾರ್ಯ ಜಯಂತಿ ಕಾರ್ಯಕ್ರಮ ಜರುಗಿತು.
ಶ್ರೀ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಷ್ಟೋತ್ತರ ನಾಮಾರ್ಚನೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಂದ ಉಪನ್ಯಾಸಕರಾದ ಗಜಾನನ ಶಾಸ್ತ್ರೀಯವರು ಶಂಕರರಜೀವನ ಹಾಗೂ ಅವರ ಅಧ್ವೈತ ಸಿದ್ದಾಂತಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಕಾರ್ಯಕ್ರಮದಲ್ಲಿ ದೇವಾಲಯದ ಆಢಳಿತ ಮಂಡಳಿಯ ಮೊಕ್ತೇಸರರು, ಹಾಗೂ ಶಂಕರ ಶೆಟ್ಟಿ,  ಜಿ,ವಿ, ಶೆಟ್ಟಿಉಪನ್ಯಾಸಕ ಗಂಗಾಧರ ನಾಯ್ಕ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಈ ಸಂದರ್ಭ ದಲ್ಲಿದೇವಾಲಯದ ವತಿಯಿಂದ ಕಾರ್ಯಕ್ರಮದ ಸಂಯೋಜಕರಾದ ರಾಮಚಂದ್ರ ಭಟ್, ಹಾಗೂ ಉಪನ್ಯಾಸಕ ಗಜಾನನ ಶಾಸ್ತ್ರೀ ಯವರಿಗೆ ದೇವಾಲಯದ ಆಡಳಿತ ಮಂಡಳಿಯಿಂದ ಗೌರವಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗೋವಿಂದರಾಯ ಶೆಟ್ಟಿಯವರು ವಂದನಾರ್ಪಣೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News