ಬೆಳ್ವೆ: ಸರಕಾರಿ ಭೂ ಕಬಳಿಕೆ; ದೂರು

Update: 2016-05-20 18:11 GMT


ಶಂಕರನಾರಾಯಣ, ಮೇ 20: ಜಾಗದ ಮೂಲ ದಾಖಲೆಗಳ ತಿದ್ದುಪಡಿಯಿಂದ ಸರಕಾರಕ್ಕೆ ವಂಚನೆ ಮಾಡಿ, ಭೂ ಮಂಜೂ ರಾತಿ ಮಾಡಿಸಿಕೊಂಡು ಸರಕಾರದ ಜಮೀನನ್ನು ಕಬಳಿಕೆ ಮಾಡಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ವೆ ಗ್ರಾಮದಲ್ಲಿ 2.17 ಎಕ್ರೆ ಹಾಗೂ ಇತರೆ ಸರಕಾರಿ ಸ್ಥಳಗಳಿಗೆ ವೈ. ದಿನಕರ ಶೆಟ್ಟಿ ಎಂಬವರು ಅರ್ಜಿ ಸಲ್ಲಿಸಿ ಅಕ್ರಮ ಸಕ್ರಮ ಸಮಿತಿಯಲ್ಲಿ ಜಮೀನನ್ನು ಮಂಜೂರಾತಿ ಪಡೆದಿದ್ದರು. ಕರ್ನಾಟಕ ವಿಧಾನ ಪರಿಷತ್ ಅರ್ಜಿ ಸಮಿತಿಯಲ್ಲಿ ನಡೆದ ವಿಚಾರಣೆಯಂತೆ ಮಂಜೂರಾತಿದಾರ ನಿರಾಪೇಕ್ಷಣಾ ಪತ್ರ ನೀಡಿಲ್ಲ ಎಂಬುದಾಗಿ ತಹಶೀಲ್ದಾರರ ವರದಿಯಲ್ಲಿ ತಿಳಿಸಲಾಗಿತ್ತು.
 ಬೆಳ್ವೆ ಗ್ರಾಮದ ದಿನಕರ ಶೆಟ್ಟಿ ಹೆಸರಿನಲ್ಲಿರುವ ಅರ್ಜಿಯನ್ನು ರಘರಾಮ ಶೆಟ್ಟಿ ಎಂದು ತಿದ್ದುಪಡಿ ಮಾಡಲಾಗಿದ್ದು, ಬೆಳ್ವೆ ಗ್ರಾಮದ ಅರ್ಜಿ ಸಂಖ್ಯೆ 22850ರಲ್ಲಿ ದಾಖಲಾಗಿರುವ ರಾಜೀವ ಶೆಟ್ಟಿ ಹೆಸರನ್ನು ತಿದ್ದುಪಡಿಯಿಂದ ವೈ.ದಿನಕರ ಶೆಟ್ಟಿ ಎಂಬುದಾಗಿ ಮಾಡಲಾಗಿದೆ. ಹೀಗೆ ಮಂಜೂರಾತಿಯಾದ ಬೆಳ್ವೆ ಗ್ರಾಮದ 2.17 ಎಕ್ರೆ ಮತ್ತು ರಘರಾಮ ಶೆಟ್ಟಿ ಎಂಬವರು ಬೆಳ್ವೆ ಗ್ರಾಮದಲ್ಲಿ 3.60 ಎಕ್ರೆ ಜಮೀನಿನ ಮೂಲದಾಖಲೆಗಳ ತಿದ್ದುಪಡಿಯಿಂದ ಸರಕಾರಕ್ಕೆ ವಂಚನೆ ಮಾಡಿ ಭೂ ಮಂಜೂರಾತಿ ಮಾಡಿಸಿಕೊಂಡು ಭೂ ಕಬಳಿಕೆ ಮಾಡಿರುವುದಾಗಿ ಕುಂದಾಪುರ ತಹಶೀಲ್ದಾರ್ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News