ಅಂತಾರಾಷ್ಟ್ರೀಯ ಕರಾಟೆಯಲ್ಲಿ ರೆಡ್‌ಕ್ಯಾಮೆಲ್ಸ್ ವಿದ್ಯಾರ್ಥಿಗಳ ಸಾಧನೆ

Update: 2016-05-20 18:29 GMT

ಮಂಗಳೂರು, ಮೇ 20: ಇತ್ತೀಚೆಗೆ ಶ್ರೀಲಂಕಾದ ಕ್ಯಾಂಡಿಯ ಪೆರೆಡೇನಿಯಾ ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ಜರಗಿದ 14ನೆ ಅಂತಾರಾಷ್ಟ್ರೀಯ ಟೆನ್‌ಶಿನ್ ಕಪ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ನಗರದ ರೆಡ್‌ಕ್ಯಾಮೆಲ್ ಇಸ್ಲಾಮಿಕ್ ಸ್ಕೂಲ್ ಇದರ ವಿದ್ಯಾರ್ಥಿಗಳು ಕುಮಿಟೇ ಮತ್ತು ಕಟಾ ವಿಭಾಗದಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಗಳಿಸಿ ಅಭೂತಪೂರ್ವ ಸಾಧನೆಗೈದಿದ್ದಾರೆ.
ಕಟಾ ವಿಭಾಗದಲ್ಲಿ ಆಯಿಶಾ ಫಾತಿಮ ಅಬ್ದುರ್ರಝಾಕ್, ಫಾತಿಮಾ ನಿಝಾ, ನಬೀಲಾ ಸುಹಾ, ಜೈಷಾ ಫಾತಿಮಾ ಚಿನ್ನದ ಪದಕ ಪಡೆದಿರುತ್ತಾರೆ. ಮುಹಮ್ಮದ್ ರಿಷಾದ್, ರಷಿದಾ ಜುಬೈರ್, ಝೈನಬ್ ಅಶ್ಫಾಕ್, ಮುಹಮ್ಮದ್ ಓವೈಸ್ ಶರೀಫ್, ಮುಹಮ್ಮದ್ ತಾಹೀದ್, ಅನಸ್ ಶರೀಫ್ ಬೆಳ್ಳಿ ಪದಕ ಪಡೆದಿರುತ್ತಾರೆ. ಕುಮಿಟೋ ವಿಭಾಗದಲ್ಲಿ ಆಯಿಶಾ ಫಾತಿಮಾ ಅಬ್ದುರ್ರಝಾಕ್, ನಬೀಲಾ ಸುಹಾ, ಝೈನಬ್ ಅಷ್ಪಾಕ್, ಮುಹಮ್ಮದ್ ರಿಷಾದ್, ಮುಹಮ್ಮದ್ ತೌಹೀದ್ ಚಿನ್ನದ ಪದಕ ಹಾಗೂ ಫಾತಿಮಾ ನಿಝಾ, ಮುಹಮ್ಮದ್ ಒವೈಸ್ ಶರೀಫ್, ಜೈಶಾ ಫಾತಿಮಾ, ಅನಸ್ ಶರೀಫ್ ಬೆಳ್ಳಿ ಪದಕ ಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News