ಮಿಸ್ಬಾಹ್ ವುಮೆನ್ಸ್ ಕಾಲೇಜಿನಲ್ಲಿ ಶುಲ್ಕ ವಿನಾಯಿತಿ

Update: 2016-05-20 18:45 GMT

ಸುರತ್ಕಲ್, ಮೇ 20: ಮಿಸ್ಬಾಹ್ ನಾಲೇಜ್ ಫೌಂಡೇಶನ್ ವತಿಯಿಂದ ಕಾಟಿಪಳ್ಳದಲ್ಲಿ ಆರಂಭಿಸಲಾದ ಮಿಸ್ಬಾಹ್ ವುಮೆನ್ಸ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಿಂದ ಬಿ.ಕಾಂ. ಮತ್ತು ಬಿ.ಎ. ತರಗತಿಗಳು ಪ್ರಾರಂಭವಾಗಲಿದ್ದು, ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಶೇ.50ರಷ್ಟು ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎಂ.ಮಮ್ತಾಝ್ ಅಲಿ ತಿಳಿಸಿದ್ದಾರೆ. ವಿಶಾಲವಾದ ತರಗತಿ ಕೊಠಡಿ, ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ವಿಶ್ರಾಂತಿ ಕೊಠಡಿ ಮುಂತಾದ ಉತ್ತಮ ಮೂಲಭೂತ ಸೌಕರ್ಯಗಳನ್ನು ಕಾಲೇಜು ಹೊಂದಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News