ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ "ಎಕ್ಸ್‌ಪೋ-2016"

Update: 2016-05-21 09:35 GMT

 ಸುಳ್ಯ, ಮೇ 21: ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ 2016 ರ ಶೈಕ್ಷಣಿಕ ವರ್ಷದ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ "ಎಕ್ಸ್‌ಪೋ-2016" ಮೇ 21ರಂದು ನಡೆಯಿತು.

ಪ್ರದರ್ಶನದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ. ಜ್ಞಾನೇಶ್ ನೆರವೇರಿಸಿದರು. ವಿವಿಧ ಇಂಜಿನಿಯರಿಂಗ್ ವಿಭಾಗಗಳ ವಿದ್ಯಾರ್ಥಿಗಳಿಂದ ಉತ್ತಮ ಪ್ರಾಜೆಕ್ಟ್‌ಗಳು ಪ್ರದರ್ಶಿತಗೊಂಡಿದ್ದು, ವಿದ್ಯಾರ್ಥಿಗಳ ಆಸಕ್ತಿ, ಶ್ರಮ ಮತ್ತು ಸೃಜನಶೀಲತೆಗೆ ಮತ್ತು ಬೋಧಕ ವೃಂದದಿಂದ ನೀಡಲ್ಪಟ್ಟ ಸೂಕ್ತ ಮಾರ್ಗದರ್ಶನಕ್ಕೆ ಪ್ರಾಂಶುಪಾಲರು, ಉಪಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರುಗಳು ಹಾಗೂ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News