ಮೇ 22 ‘ದ ಲಾಸ್ಟ್ ಫ್ಲೈಟ್’ ಮೋಷನ್ ಪಿಕ್ಚರ್ ಆಲ್ಬಂ ಬಿಡುಗಡೆ

Update: 2016-05-21 17:40 GMT

ಮಂಗಳೂರು, ಮೇ 21: ಅರೋರಾ ತಂಡ ನಿರ್ಮಾಣದ ‘ಮೇ 22 ‘ದ ಲಾಸ್ಟ್ ಫ್ಲೈಟ್’ ಮೋಷನ್ ಪಿಕ್ಚರ್ ಆಲ್ಬಂನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಇಂದು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಕುಟುಂಬದ ನೆಮ್ಮದಿಯ ಬದುಕಿಗೆ ಇಂತಹ ಜೀವಹಾನಿಗಳು ಬಹಳ ದೊಡ್ಡ ಆಘಾತವನ್ನು ತಂದು ಒಡ್ಡುತ್ತವೆ. ಈ ತಂಡದಿಂದ ಮೂಡಿಬಂದಿರುವ ಈ ಆಲ್ಬಂನಲ್ಲಿ ಆ ಕರಾಳ ದಿನದ ನೆನಪು ಮತ್ತು ಇವತ್ತಿಗೂ ತಮ್ಮವರನ್ನು ಕಳೆದುಕೊಂಡ ಆ ಕುಟುಂಬಗಳ ನೋವನ್ನು ವ್ಯಕ್ತಪಡಿಸುವಂತಿತ್ತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಜೆ.ಟಿ.ರಾಧಾಕೃಷ್ಣ ತಂಡದ ವಿಶಿಷ್ಟ ಪ್ರಯತ್ನವನ್ನು ಬೆಂಬಲಿಸಬೇಕೆಂದು ಕೋರಿದರು.

ಭಾರತ್ ಬಿಗ್ ಸಿನಿಮಾದ ಮುಖ್ಯಸ್ಥ ಬಾಲಕೃಷ್ಣ ಶೆಟ್ಟಿ, ರೆಡ್‌ರಾಕ್ಸ್ ಬಿಲ್ಡರ್ಸ್‌ ನ ಮಾಲಕ ಪ್ರಶಾಂತ್ ರಸ್ಕಿನ್ಹಾ ಉಪಸ್ಥಿತರಿದ್ದರು. ಮೇ 22 ‘ದಿ ಲಾಸ್ಟ್ ಫ್ಲೈಟ್’ ದೇಶವನ್ನೇ ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತದ ಸುತ್ತ ಹೆಣೆದ ಒಂದು ಸಂಗೀತರೂಪಕ. ಪ್ರಿಯಕರನಿಗಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಪ್ರೇಯಸಿ, ಈ ನಡುವೆ ಪ್ರೀತಿಯ ನೆನಪುಗಳು, ಕೊನೆಯಲ್ಲಿ ವಿಮಾನ ದುರಂತದ ದೃಶ್ಯಗಳು ಕಣ್ಣಮುಂದೆ ಕಟ್ಟಿದಂತಿದೆ. ವಿಶ್ಯುಲ್‌ ದೃಶ್ಯಗಳ ಹೊರತಾಗಿ ಸುಮಾರು 5,000 ಸ್ಟಿಲ್ ಇಮೇಜ್‌ಗಳನ್ನು ಹಾಗೂ 25 ಸಾವಿರ ಲೇಯರ್ಸ್‌ಗಳನ್ನು ಬಳಸಿ ನಿರ್ಮಿಸಿದ ಒಂದು ವಿನೂತನ ಪ್ರಯತ್ನ. ಪ್ರತ್ಯೇಕವಾಗಿ ತುಳು,ಕನ್ನಡ, ಹಾಗೂ ಹಿಂದಿ ಭಾಷೆಯಲ್ಲಿರುವ ಈ ಆಲ್ಬಂ ಕರ್ನಾಟಕದ ಮೊದಲ ಮೋಷನ್‌ಫಿಕ್ಟರ್ ಎನಿಸಿಕೊಳ್ಳಲಿದೆ. ವಿ.ಜೆ ವಿನೀತ್ ಈ ಆಲ್ಬಂನ ನಾಯಕನಟನಾಗಿದ್ದು ಮೊದಲ ಬಾರಿಗೆ ಕ್ಯಾಮರಾ ಎದುರಿಸುತ್ತಿರುವ ನೇಹಾಲ್ ಪರಿಣಿತ ನಾಯಕಿ. ದಿನೇಶ್‌ಆಚಾರ್ಯ ಅವರ ಪರಿಕಲ್ಪನೆ, ನಿರ್ದೇಶನದ ಈ ಆಲ್ಬಂಗೆ ಸಾಹಿತ್ಯ ಬರೆದವರು ಶಶಿರಾಜ್‌ರಾವ್ ಕಾವೂರ್, ಕರಣ್‌ಮಂಜುನಾಥ್ ಹಾಗೂ ಮಹಮ್ಮದ್ ಇಬಾದ್ ,ಡಾ.ನಿತಿನ್‌ಆಚಾರ್ಯ ಅವರ ಸಂಗೀತ, ಹರೀಶ್‌ನಾಯಕ್.ಕೆ ಅವರ ಛಾಯಾಗ್ರಹಣವಿರುವ ಈ ಅಲ್ಬಂನ ಸಹನಿರ್ದೇಶಕ ನಿತೇಶ್‌ಕುಲಾಲ್. ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಮೈಮ್‌ ರಾಮ್‌ದಾಸ್ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News