ಮಂಗಳಾ ಲಕ್ಷದ್ವೀಪ್ ಎಕ್ಸ್‌ಪ್ರೆಸ್‌ಗೆ ಕುಮಟಾದಲ್ಲಿ ತಾತ್ಕಾಲಿಕ ನಿಲುಗಡೆ

Update: 2016-05-21 17:44 GMT

ಉಡುಪಿ, ಮೇ 21: ಹಜ್ರತ್ ನಿಝಾಮುದ್ದೀನ್-ಎರ್ನಾಕುಲಂ- ಹಜ್ರತ್ ನಿಝಾಮುದ್ದೀನ್ ನಡುವೆ ಸಂಚರಿಸುವ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲಿಗೆ ಉತ್ತರ ಕನ್ನಡದ ಕುಮಟಾ ನಿಲ್ದಾಣದಲ್ಲಿ ಮೇ 28ರಿಂದ ಮುಂದಿನ ಆರು ತಿಂಗಳ ಕಾಲ ಪ್ರಾಯೋಗಿಕ ನೆಲೆಯಲ್ಲಿ ತಾತ್ಕಾಲಿಕ ನಿಲುಗಡೆಯನ್ನು ನೀಡಲಾಗುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಜೂ.9ರವರೆಗೆ ಆಗಮನ- ನಿರ್ಗಮನ ಸಮಯ ಹೀಗಿದೆ.

ಕಾರವಾರ ನಿಲ್ದಾಣಕ್ಕೆ ರಾತ್ರಿ 8:36ಕ್ಕೆ ಆಗಮನ 8:38ಕ್ಕೆ ನಿರ್ಗಮನ, ಮರು ಪ್ರಯಾಣದಲ್ಲಿ ಮಧ್ಯರಾತ್ರಿ 1:54ಕ್ಕೆ ಆಗಮನ, 1:56ಕ್ಕೆ ನಿರ್ಗಮನ, ಕುಮಟಾ ನಿಲ್ದಾಣಕ್ಕೆ ರಾತ್ರಿ 9:22ಕ್ಕೆ ಆಗಮನ 9:23ಕ್ಕೆ ನಿರ್ಗಮನ, ಮರು ಪ್ರಯಾಣದಲ್ಲಿ ಮಧ್ಯರಾತ್ರಿ 1:16ಕ್ಕೆ ಆಗಮನ, 1:18ಕ್ಕೆ ನಿರ್ಗಮನ, ಭಟ್ಕಳ ನಿಲ್ದಾಣಕ್ಕೆ ರಾತ್ರಿ 9:58ಕ್ಕೆ ಆಗಮನ, 10:00ಕ್ಕೆ ನಿರ್ಗಮನ, ಮರು ಪ್ರಯಾಣದಲ್ಲಿ ಮದ್ಯರಾತ್ರಿ 12:16ಕ್ಕೆ ಆಗಮನ, 12:18ಕ್ಕೆ ನಿರ್ಗಮನ.

ಜೂ.10ರಿಂದ ಆಗಮನ- ನಿರ್ಗಮನ ಸಮಯ ಹೀಗಿದೆ.

ಕಾರವಾರ ನಿಲ್ದಾಣಕ್ಕೆ ರಾತ್ರಿ 9:36ಕ್ಕೆ ಆಗಮನ 9:38ಕ್ಕೆ ನಿರ್ಗಮನ, ಮರು ಪ್ರಯಾಣದಲ್ಲಿ ಮಧ್ಯರಾತ್ರಿ 12:05ಕ್ಕೆ ಆಗಮನ, 12:07ಕ್ಕೆ ನಿರ್ಗಮನ, ಕುಮಟಾ ನಿಲ್ದಾಣಕ್ಕೆ ರಾತ್ರಿ 10:44ಕ್ಕೆ ಆಗಮನ 10:46ಕ್ಕೆ ನಿರ್ಗಮನ, ಮರು ಪ್ರಯಾಣದಲ್ಲಿ ರಾತ್ರಿ 11:32ಕ್ಕೆ ಆಗಮನ, 11:34ಕ್ಕೆ ನಿರ್ಗಮನ, ಭಟ್ಕಳ ನಿಲ್ದಾಣಕ್ಕೆ ರಾತ್ರಿ 11:40ಕ್ಕೆ ಆಗಮನ, 11:42ಕ್ಕೆ ನಿರ್ಗಮನ, ಮರು ಪ್ರಯಾಣದಲ್ಲಿ ರಾತ್ರಿ 10:22ಕ್ಕೆ ಆಗಮನ, 10:24ಕ್ಕೆ ನಿರ್ಗಮನ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News