ಮೂಡುಬಿದಿರೆಯ ಶೋರಿನ್ ರಿಯೂ ಕರಾಟೆ ತಂಡಕ್ಕೆ ಹಲವು ಪ್ರಶಸ್ತಿ

Update: 2016-05-21 17:59 GMT

ಮೂಡುಬಿದಿರೆ, ಮೇ 21: ಶ್ರೀ ಲಂಕಾದ ಕ್ಯಾಂಡಿಯಲ್ಲಿ ಮೇ 8 ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಶೊರಿನ್ ರಿಯೂ ಕರಾಟೆ ತಂಡವು ಹಲವು ಪ್ರಶಸ್ತಿಯನ್ನು ಪಡೆಯಿತು.

ಹುಡುಗಿಯರ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಸೋನಿ ಶೆಟ್ಟಿ 1 ಚಿನ್ನ, 1 ಬೆಳ್ಳಿ, ರಿಯಾ ಜೇಷ್ಮಾ ಅಂದ್ರಾದೆ 2 ಬೆಳ್ಳಿ ಪದಕವನ್ನು ಪಡೆದರು.

ಹುಡುಗರ ಕುಮಿಟೆ ಹಾಗೂ ಕಟಾ ವಿಭಾಗದಲ್ಲಿ ಪ್ರಖ್ಯಾತ್ ಪೂಜಾರಿ 1 ಚಿನ್ನ,, ಅಮಿತ್ ಲಾಲ್ 1 ಬೆಳ್ಳಿ, 1 ಕಂಚು, ಸೈಯದ್ ಸಲ್ಮತ್ ಅಜಿಲಾನ್ 2 ಚಿನ್ನ, ಸಫ್ರಾಝ್ ಅಬ್ದುಲ್ ಖಾದ್ರಿ 1 ಚಿನ್ನ, 1 ಬೆಳ್ಳಿ, ಅಪ್ರಾಝ್ 2 ಬೆಳ್ಳಿ, ಮುಹಮ್ಮದ್ ಅಝ್ಫಲ್ 1 ಚಿನ್ನ, 1 ಕಂಚು ಪದಕಗಳನ್ನು ಪಡೆದರು.

ಮಲೇಷ್ಯಾದಲ್ಲಿ ನಡೆಯಲಿರುವ ಕರಾಟೆ ಚಾಂಪಿಯನ್‌ಶಿಪ್‌ಗೆ ಇವರು ಆಯ್ಕೆಯಾಗಿದ್ದಾರೆ.

ಶೊರಿನ್ ರಿಯೂ ಕರಾಟೆ ಅಸೋಸಿಯೇಶನ್‌ನ ಮುಖ್ಯ ಶಿಕ್ಷಕ ನದೀಮ್ ಹಾಗೂ ಸಹಾಯಕ ಶಿಕ್ಷಕ ಸಪ್ರಾಝ್‌ರಿಂದ ತರಬೇತಿಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News