ಆರ್‌ಟಿಇ: 2ನೆ ಹಂತದ ಅರ್ಜಿಗಳ ಪರಿಷ್ಕರಣೆಗೆ ಅವಕಾಶ

Update: 2016-05-21 18:23 GMT

ಮಂಗಳೂರು, ಮೇ 21 : ಶಿಕ್ಷಣ ಹಕ್ಕು ಕಾಯ್ದೆಯಡಿ 2016-17ನೆ ಸಾಲಿನಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಮೊದಲ ಹಂತದ ಲಾಟರಿ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆಯಾಗಿದ್ದು ನೆರೆಹೊರೆ ಹೊರಗಿನ ಕಾರಣ ಅಥವಾ ದಾಖಲೆಗಳು ತಾಳೆಯಾಗದ ಕಾರಣ ಅವರು ವಾಸವಾಗಿರುವ ವಾರ್ಡ್ ವ್ಯಾಪ್ತಿಯೊಳಗಿನ ಅನುದಾನರಹಿತ ಶಾಲೆಗಳಿಗೆ ಈಗಾಗಲೆ ಸಲ್ಲಿಸಿರುವ ಅರ್ಜಿಗಳಲ್ಲಿ ಶಾಲೆಗಳ ಆದ್ಯತೆಯನ್ನು ಮತ್ತೊಮ್ಮೆ ಮಾರ್ಪಡಿಸಲು ಅವಕಾಶ ಮಾಡಿಕೊಡಲಾಗಿದೆ.

ವಾರ್ಡ್ ವ್ಯಾಪ್ತಿಯ ಹೊರಗಿನ ಶಾಲೆಗಳಿಗೆ ಆರ್‌ಟಿಇ ಅಡಿ ಪ್ರವೇಶ ಕೋರಿ ಅರ್ಜಿ ಸಲ್ಲಿಸಿದ್ದಲ್ಲಿ ಮೊದಲ ಹಂತದಲ್ಲಿ ಸೀಟು ಹಂಚಿಕೆಯಾಗದೆ 2ನೆ ಹಂತದ ಲಾಟರಿ ಪ್ರಕ್ರಿಯೆಗೆ ಅರ್ಹತಾ ಪಟ್ಟಿಯಲ್ಲಿ ಅರ್ಜಿಯನ್ನು ಪರಿಗಣಿಸಲಾಗಿದ್ದರೂ ಸಹಾ ಅಂತಹ ಪೋಷಕರು ಹಾಲಿ ವಾಸವಾಗಿರುವ ಹಾಗೂ ಅಧಿಕೃತ ವಾಸಸ್ಥಳ ದೃಢೀಕರಣ ಪತ್ರ ಹೊಂದಿರುವ, ವಾರ್ಡ್ ವ್ಯಾಪ್ತಿಯೊಳಗಿನ ಅನುದಾನರಹಿತ ಶಾಲೆಗಳಿಗೆ ಪ್ರವೇಶ ಕೋರಿ ಆದ್ಯತೆಯನ್ನು ಮತ್ತೊಮ್ಮೆ ಮಾರ್ಪಡಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಪ್ರಕ್ರಿಯೆಯನ್ನು ಆನ್‌ಲೈನ್ ತಂತ್ರಾಂಶದಲ್ಲಿ ಮೇ 23 ರೊಳಗೆ ಪರಿಷ್ಕರಿಸಲು ಅವಕಾಶವನ್ನು ಮಾಡಿಕೊಡಲಾಗಿದ್ದು ಈ ಅವಕಾಶವನ್ನು ಅರ್ಜಿದಾರರು ಸದುಪಯೋಗಪಡಿಸಿಕೊಳ್ಳಲು ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News