ಕಾಸರಗೋಡು : ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಗಾಂಜಾ; ಪೊಲೀಸರ ವಶ

Update: 2016-05-23 03:44 GMT

ಕಾಸರಗೋಡು, ಮೇ 23:   ಕಾರಿನಲ್ಲಿ  ಸಾಗಾಟ ಮಾಡುತ್ತಿದ್ದ  ಭಾರೀ ಮೌಲ್ಯದ  ಗಾಂಜಾವನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ  ವಶಪಡಿಸಿಕೊಂಡ ಹೊಸದುರ್ಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು  ಪದನ್ನಕಾಡ್ ನ  ಮೊಯ್ದಿನ್ (33), ಅಂಬಲತ್ತರದ  ಉಬೈದ್ ( 48) ಮತ್ತು  ಟಿ. ಶಫಿಕ್ ( 33) ಎಂದು ಗುರುತಿಸಲಾಗಿದೆ.

ಇವರಿಂದ  11 ಕಿಲೋ  ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನ ಢಿಕ್ಕಿ ಯಲ್ಲಿ  ನಾಲ್ಕು ಪ್ಯಾಕೆಟ್ ಗಳಲ್ಲಿ ತುಂಬಿಸಿ  ಸಾಗಾಟ ಮಾಡಲಾಗುತ್ತಿತ್ತು.
ಹೊಸದುರ್ಗ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ರಾಷ್ಟ್ರೀಯ  ಹೆದ್ದಾರಿಯ ಮಾವುಂಗಾಲ್ ನಲ್ಲಿ  ವಾಹನ ತಪಾಸಣೆ ನಡೆಸುತ್ತಿದ್ದಾಗ  ಈ ದಾರಿಯಾಗಿ ಬಂದ ಕಾರನ್ನು ತಪಾಸಣೆ ನಡೆಸಿದಾಗ  ಗಾಂಜಾ ಸಾಗಾಟ ಪತ್ತೆಯಾಗಿದೆ. ಕಾರು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲೆತ್ನಿಸಿದರೂ ಬೆನ್ನಟ್ಟಿದ ಪೊಲೀಸರು  ಹಿಡಿಯುವಲ್ಲಿ  ಯಶಸ್ವಿಯಾದರು.
ಗಲ್ಫ್ ಗೆ  ಕೊಂಡೊಯ್ಯಲು  ಇದನ್ನು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.  ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News