ಝುಲೇಕ, ಯೆನೆಪೊಯ ನರ್ಸಿಂಗ್ ಕಾಲೇಜು ವತಿಯಿಂದ ವಿಶ್ವ ದಾದಿಯರ ದಿನಾಚರಣೆ

Update: 2016-05-23 12:13 GMT

ಮಂಗಳೂರು, ಮೇ 23: ಝುಲೇಖ ನರ್ಸಿಂಗ್ ಕಾಲೇಜು, ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಯೆನೆಪೊಯ ನರ್ಸಿಂಗ್ ಹೋಂ ವತಿಯಿಂದ ವಿಶ್ವ ದಾದಿಯರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಮುಹಮ್ಮದ್ ತಾಹೀರ್ ವಹಿಸಿದ್ದರು.

ಝುಲೇಖ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್. ಕನಕವಲ್ಲಿ ವಿಶ್ವ ಆರೋಗ್ಯ ದಿನದ ಧ್ಯೇಯವಾದ ‘ಎ ಫೋರ್ಸ್‌ ಫೋರ್ ಚೇಂಜ್ - ಇಂಪ್ರೂಂಗ್ ಹೆಲ್ತ್ ಸಿಸ್ಟಮ್ ರೆಸಿಲೆನ್ಸ್’ ಎಂಬ ವಿಷಯದ ಕುರಿತು ಮಾತನಾಡಿದರು.

ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ ಆಡಳಿತ ಮಂಡಳಿಯ ವತಿಯಿಂದ ಕರ್ನಾಟಕ ರಾಜ್ಯದ ಹದಿನಾರನೇ ಫ್ಲೊರೆನ್ಸ್ ನೈಟಿಂಗೇಲ್, ಅತ್ಯುತ್ತಮ ದಾದಿ ಪ್ರಶಸ್ತಿ ವಿಜೇತೆ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ ನರ್ಸಿಂಗ್ ಸುಪರಿಂಟೆಂಡೆಂಟ್ ಮೇರಿ ವಾಸ್‌ರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ಫಿನಾನ್ಸ್ ಮೆನೇಜರ್ ಅಹ್ಮದ್ ಬಾವ ಉಪಸ್ಥಿತರಿದ್ದರು.

ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ನರ್ಸಿಂಗ್ ಸುಪರಿಂಟೆಂಡೆಂಟ್ ಮೇರಿ ವಾಸ್ ಸ್ವಾಗತಿಸಿದರು. ಝುಲೇಖ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ರೋಶಲ್ ಲೋಬೊ ವಂದಿಸಿದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News