ದಿನಕರ ದೇಸಾಯಿ ಕಾವ್ಯ ಪುರಸ್ಕಾರ: ಕವನ ಸಂಕಲನಗಳಿಗೆ ಆಹ್ವಾನ

Update: 2016-05-23 18:17 GMT

ಉಡುಪಿ, ಮೇ 23: ಅಂಕೋಲೆಯ ಡಾ.ದಿನಕರ ದೇಸಾಯಿ ಪ್ರತಿಷ್ಟಾನ ತನ್ನ 20ನೆ ವರ್ಷದ ಕಾವ್ಯ ಪುರಸ್ಕಾರಕ್ಕಾಗಿ 2013ರಿಂದ 2015ರ ನಡುವಿನ ಅವಯಲ್ಲಿ ಪ್ರಥಮ ಪ್ರಕಟನೆಯಾದ ಕವನ ಸಂಕಲನಗಳನ್ನು ‘ಕಾವ್ಯ ಪುರಸ್ಕಾರ’ಕ್ಕಾಗಿ ಆಹ್ವಾನಿಸುತ್ತಿದೆ.
ಪ್ರಶಸ್ತಿಯು 10,000 ರೂ. ಹಾಗೂ ಪ್ರಶಸ್ತಿ ಲಕಗಳನ್ನು ಹೊಂದಿರುತ್ತದೆ. ಹನಿಗವನಗಳ ಸಂಕಲನ ಮತ್ತು ಮಕ್ಕಳ ಸಂಕಲನಗಳು ಸೇರಿದಂತೆ ಎಲ್ಲಾ ಮಾದರಿಯ ಕವನಗಳಿಗೆ ಈ ಸಲದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 40 ಪುಟಗಳಿಗಿಂತ ಕಡಿಮೆ ಗಾತ್ರದ ಹಾಗೂ ಮರುಮುದ್ರಣವಾದ ಸಂಕಲನಗಳಿಗೆ ಅವಕಾಶವಿಲ್ಲ.
ಪ್ರಶಸ್ತಿಗೆ ಕವನ ಸಂಕಲನಗಳನ್ನು ಕಳುಹಿಸಲು ಆಗಸ್ಟ್ 15 ಕೊನೆಯ ದಿನವಾಗಿರುತ್ತದೆ. ಪ್ರಶಸ್ತಿ ವಿತರಣೆ ಸಮಾರಂಭವು ದಿನಕರ ದೇಸಾಯಿ ಅವರ ಜನ್ಮದಿನವಾದ ಸೆ.10 ಅಥವಾ ಅವರ ಪುಣ್ಯತಿಥಿಯ ದಿನವಾದ ನ.6ರಂದು ಅಂಕೋಲ ಅಥವಾ ಉತ್ತರ ಕನ್ನಡ ಜಿಲ್ಲೆಯ ಯಾವುದೇ ಸ್ಥಳದಲ್ಲಿ ನಡೆಯಲಿದೆ.
ಆಸಕ್ತರು ಕವನ ಸಂಕಲನದ ನಾಲ್ಕು ಪ್ರತಿಗಳನ್ನು ಕಾರ್ಯದರ್ಶಿ, ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ, ‘ಪರಿಮಳ’, ಅಂಬಾರಕೊಡ್ಲ, ಅಂಕೋಲಾ, ಉತ್ತರ ಕನ್ನಡ ಜಿಲ್ಲೆ ಇವರಿಗೆ ಆ.15ರೊಳಗೆ ತಲುಪುವಂತೆ ಕಳುಹಿಸಬೇಕು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ವಿಷ್ಣು ನಾಯ್ಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News