ಕೃಷ್ಣ ಮಠದಲ್ಲಿ ಸಸಿ ವಿತರಣೆಗೆ ಕೌಂಟರ್ ಉದ್ಘಾಟನೆ

Update: 2016-06-14 18:46 GMT

ಉಡುಪಿ, ಜೂ.14: ಗಿರಿ, ಪರ್ವತ ಹಾಗೂ ಅರಣ್ಯಗಳು ಇರುವವರೆಗೆ ಈ ಭೂಮಿಯ ಮೇಲೆ ಮಾನವ ಸಂತತಿ ಆರಾಮವಾಗಿ ಬದುಕಬಹುದು. ಆದರೆ ಇಂದು ವಿವಿಧ ಪ್ರಲೋಭಗಳಿಗೆ ಒಳಗಾಗಿ ಮಾನವ ಮರಗಿಡ-ಅರಣ್ಯಗಳ ನಾಶಕ್ಕೆ ಮುಂದಾಗಿದ್ದಾನೆ. ಇದನ್ನು ತಪ್ಪಿಸಿ ಮರಗಿಡಗಳನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಮ್ಮ ಪಂಚಮ ಪರ್ಯಾಯದ ಯೋಜನೆಯಾಗಿ ಪರ್ಯಾಯೋ ತ್ಸವ ದರ್ಬಾರ್ ಸಭೆಯಲ್ಲಿ ಘೋಷಿಸಿದ ‘ವೃಕ್ಷರಕ್ಷ ವಿಶ್ವರಕ್ಷ’ ಯೋಜನೆಯಂತೆ ಆಸಕ್ತ ಸಾರ್ವಜನಿಕರಿಗೆ ಕೃಷ್ಣನ ಹೆಸರಿನಲ್ಲಿ ನೆಟ್ಟು ಪೋಷಿಸಲು ಅನುಕೂಲವಾಗುವಂತೆ ಕೃಷ್ಣಮಠದಲ್ಲಿ ಸಸಿ ವಿತರಣಾ ಕೌಂಟರ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಉದ್ಘಾಟಿಸಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು. ಮಠದ ದಿವಾನ ಎಂ.ರಘುರಾಮಾಚಾರ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News