ಜೂ.26ರಂದು ಬ್ರಹ್ಮಶ್ರಿ ನಾರಾಯಣ ಗುರು ಸೇವಾ ಸಂಘದ ಬೆಳ್ಳಿಹಬ್ಬ ಆಚರಣೆ

Update: 2016-06-23 14:48 GMT

ಪುತ್ತೂರು, ಜೂ.23: ಪುತ್ತೂರಿನ ಬಲ್ನಾಡು ಉಜ್ರುಪಾದೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘದ 25ನೆ ವರ್ಷದ ಮಹಾಸಭೆ, ಬೆಳ್ಳಿಹಬ್ಬ ಆಚರಣೆ ಜೂ.26ರಂದು ಉಜ್ರುಪಾದೆ ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ಉಜ್ರುಪಾದೆ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಕೆ.ಬಾಬು ಪೂಜಾರಿ ಬಲ್ನಾಡು ತಿಳಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9:30ಕ್ಕೆ ಗುರುಪೂಜೆ, 10:30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಘದ ಕಾರ್ಯಾಧ್ಯಕ್ಷ ಕೆ.ಚಂದ್ರಶೇಖರ ಕಂಟ್ರಾಣಿಮೂಲೆ ಅಧ್ಯಕ್ಷತೆ ವಹಿಸುವರು. ಪುತ್ತೂರು ಬಿಲ್ಲವ ಸಂಘ ಅಧ್ಯಕ್ಷ ಜಯಂತ ನಡುಬೈಲು, ಪ್ರ.ಕಾರ್ಯದರ್ಶಿ ವಿಶ್ವನಾಥ ಕೆಂಗುಡೇಲು, ಕೋಶಾಧಿಕಾರಿ ಚಂದ್ರಕಾಂತ ಶಾಂತಿವನ, ಜತೆ ಕಾರ್ಯದರ್ಶಿ ಕೇಶವ ಬೆದ್ರಾಳ, ತಾಲೂಕು ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಜಯಶ್ರೀ ಪೆರಿಯಡ್ಕ, ಯುವವಾಹಿನಿ ಘಟಕ ಅದ್ಯಕ್ಷ ಶಶಿಧರ ಕಿನ್ನಿಮಜಲು, ಪುತ್ತೂರು ನಗರ ವಲಯ ಸಂಚಾಲಕ ಜಯಂತ ಬಾಯಾರು, ಬಿಲ್ಲವ ವಿದ್ಯಾರ್ಥಿ ಸಂಘ ಅಧ್ಯಕ್ಷ ಸಮಿತ್ ಪರ್ಪುಂಜ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಪ್ರಧಾನ ಅರ್ಚಕ ಸದಾಶಿವ ನೆಲ್ಲಿತ್ತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರ ಸೀತಾರಾಮ ಭಟ್‌ರಿಗೆ ವಿಶೇಷ ಗೌರವಾರ್ಪಣೆ ನಡೆಯಲಿದೆ. ವೀರಮಂಗಲ ಅಂಚೆ ಇಲಾಖೆಯ ಜನಾರ್ದನ ಬಂಗೇರ, ವೈದಿಕಶಾಸ್ತ್ರ ಪ್ರವೀಣ ಚಿದಾನಂದ ಶಾಂತಿ ಬಂಟ್ವಾಳ, ಪುತ್ತೂರು ಬಿಲ್ಲವ ಗ್ರಾಮ ಸಮಿತಿ ಸಂಘಟಕ ನವೀನ ಶಿಬರಾಡಿ, ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ್, ಬಲ್ನಾಡು ಗ್ರಾಪಂ ಅಧ್ಯಕ್ಷ ವಿನಯ, ವಿದ್ಯಾದಾನಿ ಜಯಂತ ನಡುಬೈಲು ಅವರನ್ನು ಸನ್ಮಾನಿಸಲಾಗುವುದು. ಬಲ್ನಾಡು ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಆನಂದ ಸುವರ್ಣ, ಬಲ್ನಾಡು ಗ್ರಾಪಂ ಉಪಾಧ್ಯಕ್ಷೆ ನಳಿನಿ ಕೆ. ಕಲ್ಲಾಜೆ, ಸದಸ್ಯ ನವೀನ ಕರ್ಕೇರ ರಾಂಬೈಲು ಅವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಸಂಘದ ಕಾರ್ಯಾಧ್ಯಕ್ಷ ಕೆ.ಚಂದ್ರಶೇಖರ ಕಂಟ್ರಾಣಿಮೂಲೆ, ಪುತ್ತೂರು ನಗರ ವಲಯದ ಸಂಚಾಲಕ ಜಯಂತ ಬಾಯಾರು, ಯುವವಾಹಿನಿ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಬಸಂತಕೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News