ಕೋಟ: ಯುವತಿ ನಾಪತ್ತೆ

Update: 2016-06-25 06:33 GMT


ಕೋಟ, ಜೂ.24: ಕೋಟ ಪಡುಕೆರೆಯ ಅಬ್ದುಲ್ ಕರೀಂ ಎಂಬವರ ಮಗಳು ತಸ್ರೀನಾ(22) ಮೇ 28ರಂದು ಸಂಜೆ ಕೋಟತಟ್ಟು ಗ್ರಾಮದ ಧರ್ಮಸ್ಥಳ ಸ್ವಸಹಾಯ ಸಂಘಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.
ಈಕೆ 1 ವರ್ಷದಿಂದ ಪ್ರೀತಿಸುತ್ತಿದ್ದ ಪಾರಂಪಳ್ಳಿಯ ಉದಯ ಎಂಬಾತನ ಜೊತೆಗೆೆ ಹೋಗಿರುವ ಅನುಮಾನವಿದೆ ಎಂಬುದಾಗಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 150 ಸೆ.ಮೀ. ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಮೆರೂನ್ ಕಲರ್ ಟಾಪ್ ಧರಿಸಿದ್ದು, ಇಂಗ್ಲಿಷ್, ಕನ್ನಡ, ಮಲಯಾಳಂ ಭಾಷೆ ಬಲ್ಲವರಾಗಿದ್ದಾರೆ.
ಇವರ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಉಡುಪಿ 0820-2526444 ಅಥವಾ ಪೊಲೀಸ್ ವೃತ್ತ ನಿರೀಕ್ಷಕರು ಬ್ರಹ್ಮಾವರ ವೃತ್ತ 0820-2561966, 9480805432 ಅಥವಾ ಪೊಲೀಸ್ ಉಪನಿರೀಕ್ಷಕರು, ಕೋಟ 0820- 2564155, 9480805454ನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News