ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಸಂವಾದ

Update: 2016-06-24 18:33 GMT

ಮಂಗಳೂರು, ಜೂ.24: ನಗರದ ಸ್ವರೂಪ ಅಧ್ಯಯನ ಕೇಂದ್ರದಲ್ಲಿ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಜೊತೆ ಮಕ್ಕಳು ಹಾಗೂ ಶಿಕ್ಷಕರು ಅನೇಕ ತಾತ್ವಿಕ ವಿಚಾರಗಳ ಬಗ್ಗೆ ಸಂವಾದ ನಡೆಸಿದರು.
ಗದ್ದಲದ ನಂತರದ ಶಾಂತತೆಯ ಅನುಭವ, ಕೋಪದಿಂದ ಶಾಂತತೆಗೆ ಬರುವ ದಾರಿ ಹೇಗೆ ಇದೆಯೋ ಹಾಗೆ ನೋಡಬೇಕಾದ ಅಗತ್ಯ, ಒಳನೋಟ-ಮೇಲ್ನೋಟ ಇತ್ಯಾದಿಗಳ ಬಗ್ಗೆ ಆಳವಾಗಿ ಚರ್ಚೆ ನಡೆಸಿದರು.
ಈ ಹಿನ್ನೆಲೆಯಲ್ಲಿ ತೋಳ್ಪಾಡಿಯವರ ಸ್ವರೂಪ ಭಾವ ಭವಿಷ್ಯ ಚಿತ್ರದಲ್ಲಿ ರೇಖೆ, ಪ್ರತಿಮೆಗಳ ಮೂಲಕ ವಿದ್ಯಾರ್ಥಿಗಳು ಬಿಂಬಿಸಿ, ಚಿತ್ರಗಳನ್ನು ಕಾಣಿಕೆಯಾಗಿ ನೀಡಿದರು.
ಖ್ಯಾತ ಸಾಹಿತಿ ಗುರುರಾಜ ಮಾರ್ಪಳ್ಳಿ, ತೋಳ್ಪಾಡಿಯವರ ಪರಿಚಯ ಮಾಡಿದರು. ಪ್ರಾಂಶುಪಾಲೆ ಸುಮಂಗಲಾ ಸ್ವಾಗತಿಸಿದರು. ಸಂಸ್ಥೆಯ ನಿರ್ದೇಶಕ ಗೋಪಾಡ್ಕರ್ ವಂದಿಸಿದರು. ಈ ಸಂದರ್ಭ ಬೆಲ್ಜಿಯಂನ ಸಂಶೋಧಕ ಬಾಲಗಂಗಾಧರ್ ಎಸ್. ಹಾಗೂ ಅವರ ತಂಡದ ಫಿಲಿಪ್ಸ್ ಮತ್ತು ಪೀಚ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News