ಕೌಟುಂಬಿಕ ಮೌಲ್ಯಗಳ ಕುಸಿತ ತಡೆಗಟ್ಟುವುದು ಅನಿವಾರ್ಯ: ನೂರ್ ಬೀನ್ ರಶೀದ್

Update: 2016-06-25 14:03 GMT

ಕಾಸರಗೋಡು, ಜೂ.25: ಕೌಟುಂಬಿಕ ಮೌಲ್ಯಗಳ ಕುಸಿತ ತಡೆಗಟ್ಟುವುದು ಅನಿವಾರ್ಯ ಎಂದು ರಾಜ್ಯ ಮಹಿಳಾ ಆಯೋಗದ ಸದಸ್ಯೆ ನ್ಯಾಯವಾದಿ ನೂರ್ ಬೀನ್ ರಶೀದ್ ಅಭಿಪ್ರಾಯಪಟ್ಟಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಆಯೋಗ ಅದಾಲತ್ನಲ್ಲಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ 52 ದೂರುಗಳನ್ನು ಆಯೋಗ ಪರಿಗಣನೆಗೆ ತೆಗೆದುಕೊಂಡಿದ್ದು, ಇವುಗಳಲ್ಲಿ ಬಹುತೇಕ ಕೌಟುಂಬಿಕ ಸಮಸ್ಯೆಗಳಾಗಿವೆ. ಉದ್ಯೋಗದ ಸ್ಥಳದಲ್ಲಿನ ಶೋಷಣೆ, ಮೊಬೈಲ್ ಫೋನ್ ದುರುಪಯೋಗ ಮೊದಲಾದ ಪ್ರಕರಣಗಳು ಅದಾಲತ್ಗೆ ಬಂದಿದ್ದವು.

ಲಭಿಸಿದ ದೂರುಗಳಲ್ಲಿ 18ನ್ನು ಇತ್ಯರ್ಥಗೊಳಿಸಲಾಯಿತು. 13 ದೂರುಗಳಿಗೆ ಪೊಲೀಸರಿಂದ ವರದಿ ಕೇಳಲು ತೀರ್ಮಾನಿಸಲಾಯಿತು. ನಾಲ್ಕು ಪ್ರಕರಣಗಳಿಗೆ ಆರ್ಡಿಒ ವರದಿ ಪಡೆಯಲು ನಿರ್ಧರಿಸಲಾಯಿತು. ಮೂರು ದೂರುಗಳಿಗೆ ಕೌನ್ಸಿಲಿಂಗ್ ನಡೆಸಲು, ಹದಿಮೂರು ಪ್ರಕರಣಗಳನ್ನು ಮುಂದಿನ ಅದಾಲತ್ ನಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಿರುವುದಾಗಿ ಆಯೋಗದ ಸದಸ್ಯ ನೂರ್ ಬೀನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News