ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಾಗಬೇಕು: ಮೀನಾಕ್ಷಿ ಶಾಂತಿಗೋಡು

Update: 2016-06-25 16:22 GMT

ಪುತ್ತೂರು, ಜೂ.25: ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರ ಗೌರವ ಧನವನ್ನು ಹೆಚ್ಚು ಮಾಡುವ ಮೂಲಕ ಅವರ ಕೆಲಸಕ್ಕೆ ಸೂಕ್ತ ಗೌರವವೂ ಸಿಗುವಂತಾಗಬೇಕು ಎಂದು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜಲಡ್ಕ ಎಂಬಲ್ಲಿ ನಿರ್ಮಿಸಲಾದ ನೂತನ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಎಳವೆಯಲ್ಲೇ ಉತ್ತಮರನ್ನಾಗಿಸಲು ಪ್ರಯತ್ನವನ್ನು ಮಾಡುವ ಕೇಂದ್ರವಾಗಿದೆ. ಇಲ್ಲಿ ಸೇವೆ ಮಾಡುವ ಕಾರ್ಯಕರ್ತರು ಬಹಳ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಸರಕಾರದ ಬಹುತೇಕ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಅಂಗನವಾಡಿ ಕಾರ್ಯಕರ್ತರು ಮಾಡುತ್ತಿದ್ದು, ಅವರ ಸೇವೆಗೆ ಗೌರವ ಸಿಗುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಸ್ಥಳೀಯರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವ ಮೂಲಕ ಕೇಂದ್ರವನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ದಾನಿ ಬಾಳಪ್ಪ ರೈ ಅವರನ್ನು ಸಾರ್ವಜನಿಕರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

 ತಾ.ಪಂ. ಸದಸ್ಯರಾದ ಮೀನಾಕ್ಷಿ ಮಂಜುನಾಥ್, ಹರೀಶ್ ಬಿಜತ್ರೆ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್ ರೈ ನೀರ್ಪಾಡಿ, ಉಪಾಧ್ಯಕ್ಷೆ ಸುನಂದ, ಸದಸ್ಯರಾದ ತ್ರಿವೇಣಿ, ಉಷಾ ನಾರಾಯಣ, ಮಹೇಶ್ ರೈ, ಯುವತಿ ಮಂಡಲದ ಅಧ್ಯಕ್ಷೆ ಬೇಬಿ, ಯುವಕ ಮಂಡಲದ ಅಧ್ಯಕ್ಷ ಗಣೇಶ್ ರೈ, ಉಪಸ್ಥಿತರಿದ್ದರು.

ಚನಿಯಪ್ಪ ನಾಯ್ಕ ಸ್ವಾಗತಿಸಿ, ಪ್ರಭಾತ್ ಕುಮಾರ್ ರೈ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News