ನಕಲಿ ಚಿನ್ನಾಭರಣ ವಂಚನೆ ಪ್ರಕರಣ ಮತ್ತೋರ್ವ ಆರೋಪಿಯ ಬಂಧನ

Update: 2016-06-25 18:22 GMT

ಕಾಸರಗೋಡು, ಜೂ.25: ಪಿಲಿಕ್ಕೋಡು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ನಕಲಿ ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ಮ್ಯಾನೇಜರ್‌ನ ಸ್ನೇಹಿತ ನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರಾದವರ ಸಂಖ್ಯೆ ಮೂರಕ್ಕೇರಿದೆ. ಬಂಧಿತನನ್ನು ಕೊಡೋತ್ ಪಿಲಿಕ್ಕೋಡ್ ರೈಲ್ವೆ ಮೇಲ್ಸೇ ತುವೆ ಸಮೀಪದ ಸಿ. ಸುಭಾಷ್(40) ಎಂದು ಗುರುತಿ ಸಲಾಗಿದೆ. ಈ ನಡುವೆ ನಕಲಿ ಚಿನ್ನಾಭರಣ ಅಡವಿಟ್ಟು 80.48 ಲಕ್ಷ ರೂ. ಸಾಲ ಪಡೆದು ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರಾದ ಬ್ಯಾಂಕ್ ಮ್ಯಾನೇಜರ್ ಎಂ.ವಿ. ಶರತ್ ಚಂದ್ರನ್, ಅಪ್ರೈಸರ್ ಪಿ.ವಿ. ಕುಂಞರಾಮನ್ ಅವರನ್ನು ಬ್ಯಾಂಕ್‌ಗೆ ಕರೆತಂದು ತನಿಖಾ ತಂಡ ಮಾಹಿತಿ ಕಲೆಹಾಕಿತು.
ಸುಭಾಷ್ ಐದು ಬಾರಿ ನಕಲಿ ಚಿನ್ನಾಭರಣ ಅಡವಿಟ್ಟು ಈ ವಂಚನೆ ನಡೆಸಿದ್ದನು. ಬ್ಯಾಂಕ್ ಮ್ಯಾನೇಜರ್‌ಗೆ ಗೊತ್ತಿದ್ದೇ ಈ ವಂಚನೆ ನಡೆಸಿದ್ದನು ಎಂದು ತನಿಖೆಯಿಂದ ತಿಳಿದುಬಂದಿದೆ.
  ಹಲವಾರು ಮಂದಿ ಈ ವಂಚನೆಯಲ್ಲಿ ಶಾಮೀಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಹಲವು ಸಹಕಾರಿ ಬ್ಯಾಂಕ್‌ಗಳಲ್ಲಿ ವಂಚನೆ ನಡೆದಿದ್ದು, ಬೆಳಕಿಗೆ ಬಂದ ನಾಲ್ಕು ಬ್ಯಾಂಕ್‌ಗಳ ವಂಚನೆ ಪ್ರಕರಣಗಳಲ್ಲಿ ಬಂಧಿತರಾದವರ ಸಂಖ್ಯೆ 9 ಕ್ಕೇರಿದೆ. ಸುಮಾರು ಎಂಟು ಲಕ್ಷ ರೂ. ಗಳ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News