ಬರ್ಕೆ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಇಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಡೆಯಿತು

Update: 2016-06-26 14:44 GMT

ಮಂಗಳೂರು,ಜೂ.26: ಬರ್ಕೆ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಇಂದು ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳ ಜಾಥ ನಡೆಯಿತು. ನಗರದ ಲಾಲ್‌ಭಾಗ್‌ನಲ್ಲಿರುವ ಕ್ರೀಡಾ ವಸತಿ ನಿಲಯದಿಂದ ಲಾಲ್‌ಭಾಗ್, ಲೇಡಿಹಿಲ್, ಮಂಗಳಾ ಕ್ರಿಡಾಂಗಣದಿಂದ ಮತ್ತೆ ಲಾಲ್‌ಭಾಗ್‌ನ ಕ್ರೀಡಾವಸತಿ ನಿಲಯದವರೆಗೂ ಜಾಥ ನಡೆಯಿತು.ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವಿಸದಂತೆ ಜಾಗೃತಿಯನ್ನುಂಟುಮಾಡುವ ಘೋಷಣೆಗಳನ್ನು ಹಾಕಿದರು. ಕ್ರೀಡಾ ವಸತಿ ನಿಲಯದ ಸುಮಾರು 60 ವಿದ್ಯಾರ್ಥಿಗಳು , ಮನಪಾ ಸದಸ್ಯ ನವೀನ್ ಚಂದ್ರ, ಬರ್ಕೆ ಇನ್ಸ್‌ಪೆಕ್ಟರ್ ರಾಜೇಶ್ ಮತ್ತು ಬರ್ಕೆ ಪೊಲೀಸ್ ಠಾಣಾ ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News