ಬಂಟ್ವಾಳ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

Update: 2016-06-26 18:31 GMT

ಬಂಟ್ವಾಳ, ಜೂ. 26: ಲಯನ್ಸ್ ಕ್ಲಬ್‌ನ ಬಂಟ್ವಾಳ ಘಟಕ ನಾಯಕತ್ವಕ್ಕೆ ವಿಶೇಷ ಮಹತ್ವ ನೀಡಿ ಹಲವಾರು ನಾಯಕರನ್ನು ರೂಪಿಸಿದೆ. ಉತ್ತಮ ಗುಣಮಟ್ಟದ ಸದಸ್ಯರನ್ನು ಕ್ಲಬ್‌ಗೆ ಪರಿಚಯಿಸುವ ಮೂಲಕ ಉತ್ತಮ ಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ ಎಂದು ಲಯನ್ಸ್ ಕ್ಲಬ್ ಮಲ್ಟಿಪಲ್ ಕೌನ್ಸಿಲ್‌ನ ಪೂರ್ವಾಧ್ಯಕ್ಷ ಕೆ.ಮೋಹನ್ ಕಾಮತ್ ಅಭಿಪ್ರಾಯಪಟ್ಟರು.
ರವಿವಾರ ಬಿ.ಸಿ.ರೋಡ್‌ನ ಲಯನ್ಸ್ ಸೇವಾ ಮಂದಿರದಲ್ಲಿ ಬಂಟ್ವಾಳ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಸನ್ಮಾನ ಸ್ವೀಕರಿಸಿ ಮಾತನಾಡಿ, ಬಂಟ್ವಾಳ ಪುರಸಭೆ ಸ್ವಚ್ಛತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರತಿ ಗುರುವಾರ ನಡೆಸುವ ಸ್ವಚ್ಛತಾ ಆಂದೋಲನದಲ್ಲಿ ಲಯನ್ಸ್ ಸಂಸ್ಥೆಯ ಸದಸ್ಯರು ಕೈ ಜೋಡಿಸುವಂತೆ ಮನವಿ ಮಾಡಿದರು. ಕರ್ನಾಟಕ ಬ್ಯಾಂಕ್‌ನ ಚೇರ್‌ಮ್ಯಾನ್ ಅನಂತಕೃಷ್ಣ ಶುಭ ಹಾರೈಸಿದರು.
ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಕುಲಾಲ್ ಅಗ್ರಬೈಲು, ಕಾರ್ಯದರ್ಶಿಯಾಗಿ ಉಮೇಶ್ ಆಚಾರ್, ಕೋಶಾ ಧಿಕಾರಿಯಾಗಿ ಶ್ರೀನಿವಾಸ ಪೂಜಾರಿ, ಲಯನೆಸ್ ಕ್ಲಬ್‌ನ ನೂತನ ಅಧ್ಯಕ್ಷೆ ಯಾಗಿ ದೇವಿಕಾ ದಾಮೋದರ್, ಕಾರ್ಯದರ್ಶಿಯಾಗಿ ಶರ್ಮಿಳಾ ಸುಧಾಕರ್, ಕೋಶಾಧಿಕಾರಿಯಾಗಿ ವೃಂದ ಎಸ್.ಕುಡ್ವ ಹಾಗೂ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
  ಕ್ಲಬ್‌ನ ಅಧ್ಯಕ್ಷ ಜಯಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ದಾಮೋದರ್ ಬಿ.ಎಂ., ಕ್ಲಬ್‌ನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಕೋಶಾಧಿಕಾರಿ ಫ್ರಾನ್ಸಿಸ್ ಸಲ್ಡಾನ, ಲಯನೆಸ್ ಕ್ಲಬ್‌ನ ಅಧ್ಯಕ್ಷೆ ಗೀತಾ ಜೆ. ಶೆಟ್ಟಿ, ಕಾರ್ಯದರ್ಶಿ ಚಿತ್ರಾ ಜೆ. ಎಡಪಡಿತ್ತಾಯ, ಕೋಶಾಧಿಕಾರಿ ಜ್ಯೋತಿ ಮಧ್ವರಾಜ್‌ಮತ್ತಿತರರು ಉಪಸ್ಥಿತರಿದ್ದರು.
ಉಮೇಶ್ ಆಚಾರ್ ವಂದಿಸಿದರು, ಮಧ್ವರಾಜ್ ಕಲ್ಮಾಡಿ ನಿರೂಪಿಸಿದರು. ವಸಂತ ಶೆಟ್ಟಿ ಸಹಕರಿಸಿದರು. ಬಳಿಕ ಪಾಂಚಜನ್ಯ ಯಕ್ಷಗಾನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News