ಪಡೀಲ್ ರೈಲ್ವೆ ಮೇಲ್ಸೇತುವೆಯಿಂದ ಮಲಮೂತ್ರ ಸಿಂಚನ!

Update: 2016-06-26 18:36 GMT

ಮಂಗಳೂರು, ಜೂ.26: ನಗರದ ಹೊರವಲಯದಲ್ಲಿರುವ ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರೈಲ್ವೆ ಮೇಲ್ಸೇತು ವೆಯಲ್ಲಿ ರೈಲು ಸಂಚಾರದ ವೇಳೆ ಮಲಮೂತ್ರಗಳ ಸಿಂಚನವಾಗುತ್ತಿದ್ದು, ಇದರಿಂದ ಹೆದ್ದಾರಿ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.
ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಪಡೀಲ್  ನಲ್ಲಿ ಹೆದ್ದಾರಿಯ ಮೇಲೆ ರೈಲ್ವೆ ಮೇಲ್ಸೇತುವೆಯಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಸೇತುವೆಯ ಮೇಲೆ ದಿನಕ್ಕೆ ಹಲವು ರೈಲುಗಳು ಹಾದುಹೋಗುತ್ತವೆ. ಈ ಸಂದರ್ಭ ಗಳಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಜನರು ಮಲಮೂತ್ರಗಳ ಸಿಂಚನವನ್ನು ಸಹಿಸಿಕೊಳ್ಳಲೇಬೇಕಾಗಿದೆ.

ಒಂದು ರೈಲಿನಲ್ಲಿ ಸಾವಿರಾರು ಪ್ರಯಾಣಿಕರಿರುವುದರಿಂದ ಶೌಚಾಲಯಗಳು ಬಳಕೆಯಾಗುತ್ತಲೇ ಇರುತ್ತವೆ. ಈ ಶೌಚಾಲಯಗಳಲ್ಲಿನ ಮಲಮೂತ್ರಗಳು ಹಳಿಗಳಿಗೆ ಬೀಳುವುದು ಸಾಮಾನ್ಯ. ಆದರೆ ರೈಲು ಹೆದ್ದಾರಿ ಮೇಲ್ಸೇ ತುವೆಯ ಮೇಲೆ ಹಾದು ಹೋಗುವ ವೇಳೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಪಡೀಲ್ ರೈಲ್ವೆ ಮೇಲ್ಸೇತುವೆಯ ತಳಭಾಗ ತೆರೆದ ರೀತಿಯಲ್ಲಿರುವುದೇ ಈ ಸಮಸ್ಯೆಗೆ ಮೂಲಕ ಕಾರಣ. ಇದರಿಂದಾಗಿ ರೈಲಿನಲ್ಲಿ ಮಾಡುವ ಶೌಚ ನೇರವಾಗಿ ಹೆದ್ದಾರಿಯ ಮೇಲೆ ಬೀಳುತ್ತವೆ. ಈ ವೇಳೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರ ಮೇಲೆ, ಪಾದಚಾರಿಗಳ ಮೇಲೆ ಇದು ಸಿಂಚನಗೊಳ್ಳುತ್ತವೆ.
ಈ ಸಮಸ್ಯೆಯ ಅರಿವು ಇರುವವರು ರೈಲ್ವೆ ಮೇಲ್ಸೇತುವೆಯ ರೈಲು ಸಂಚರಿಸುತ್ತಿದ್ದಲ್ಲಿ ಅದು ಹಾದು ಹೋಗುವ ವರೆಗೆ ದೂರದಲ್ಲಿ ವಾಹನಗಳನ್ನು ನಿಲ್ಲಿಸಿ ಮತ್ತೆ ಸಂಚಾರ ಮುಂದುವರಿಸುತ್ತಾರೆ. ಇದು ಗೊತ್ತಿಲ್ಲದೆ ಸಂಚರಿಸಿದವರ ಮೈಮೇಲೆ ಹೇಸಿಗೆ ಬೀಳುವುದು ಸಾಮಾನ್ಯವಾಗಿದೆ.
ಈ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಯಾರು ಪ್ರಯತ್ನಿಸುತ್ತಿಲ್ಲ. ಸರಕಾರ ಈ ಬಗ್ಗೆ ಇನ್ನಾದರೂ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಲಿ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮೂಲಭೂತ ಸೌಕರ್ಯ ಒದಗಿಸು ವುದು ರೈಲ್ವೆ ಅಧಿಕಾರಿಗಳ ಕರ್ತವ್ಯ. ಈ ಬಗ್ಗೆ ನಾನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಅದನ್ನು ಸರಿಪಡಿಸಲು ಕ್ರಮ ಕೈಗೊಂಡಿಲ್ಲ. ಇನ್ನು ಒಂದು ವಾರದೊಳಗೆ ಇದನ್ನು ಸರಿಪಡಿಸದಿದ್ದರೆ ನಾನು ರೈಲ್ವೆ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸುತ್ತೇನೆ.
-ಐವನ್ ಡಿಸೋಜ, ಶಾಸಕ, ರೈಲ್ವೆ ಸಲಹಾ ಮಂಡಳಿ ಸದಸ್ಯ

  ಪಡೀಲ್ ರೈಲ್ವೆ ಮೇಲ್ಸೇತುವೆಯಲ್ಲಿ ರೈಲು ಹಾದು ಹೋಗುವ ವೇಳೆ ಶೌಚಾಲಯದ ನೀರು ವಾಹನ ಸವಾ ರರ ಮೇಲೆ ಬೀಳುತ್ತಲೇ ಇರುತ್ತದೆ. ಈ ವಿಚಾರ ಗೊತ್ತಿದ್ದವರು ರೈಲು ಹಾದು ಹೋಗುವ ತನಕ ಕಾಯುತ್ತಾರೆ. ಗೊತ್ತಿಲ್ಲದವರ ಮೇಲೆ ಶೌಚ ನೀರು ಸಿಂಪಡಣೆ ಆಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಸಮಸ್ಯೆಯನ್ನು ಕಂಡೂ ಕಾಣ ದಂತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೆಕಾಗಿದೆ.
    - ರವಿಕುಮಾರ್, ದ್ವಿಚಕ್ರ ಸವಾರ

Writer - * ವಿನೋದ್ ಪುದು

contributor

Editor - * ವಿನೋದ್ ಪುದು

contributor

Similar News