ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ

Update: 2016-06-29 18:28 GMT


ಉಡುಪಿ, ಜೂ.29: ಕಾರ್ಕಳ ತಾಲೂಕಿನ ಈದು ಗ್ರಾಪಂನ ಒರಿಮಾರು ಅಂಗನವಾಡಿ ಕೇಂದ್ರ, ಇನ್ನಾ ಗ್ರಾಪಂ ವ್ಯಾಪ್ತಿಯ ಕಾಯಿನಾಲು ಹಾಗೂ ನಿಟ್ಟೆ ಗ್ರಾಪಂನ ದೂಪದಕಟ್ಟೆ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೆ ತರಗತಿ ತೇರ್ಗಡೆಯಾದ 18ರಿಂದ 44 ವಯೋಮಿತಿಯ ಅದೇ ಗ್ರಾಮದಲ್ಲಿ ವಾಸ್ತವ್ಯವಿರುವ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜು.20 ಕೊನೆಯ ದಿನವಾಗಿದೆ. ಉಡುಪಿ: ಕಾರ್ಕಳ ತಾಲೂಕಿನ ಕಡ್ತಲ ಗ್ರಾಪಂ ವ್ಯಾಪ್ತಿಯ ಕಂಬಳಗುಡ್ಡೆ ಅಂಗನ ವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆಗೆ ಎಸ್ಸೆಸೆಲ್ಸಿ ತೇರ್ಗಡೆಯಾದ 18 ರಿಂದ 44 ವಯೋಮಿತಿಯ ಅದೇ ಗ್ರಾಮದಲ್ಲಿ ವಾಸವಿರುವ ಅರ್ಹ ಮಹಿಳಾ ಅಭ್ಯರ್ಥಿ ಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜು.20 ಕೊನೆಯ ದಿನ. ಹೆಚ್ಚಿನ ವಿವರಗಳಿಗೆ ಕಾರ್ಕಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯನ್ನು ಸಂಪರ್ಕಿ ಸಬಹುದು.  
ಸಿಐಟಿಯು ಸದಸ್ಯೆ ಮೀನಾಕ್ಷಿ ಮತ್ತಿತರರು ಉಪಸ್ಥಿತರಿದ್ದರು. ವೀಣಾ ಹೊಸಂಗಡಿ ವಂದಿಸಿದರು. ರೋಹಿಣಿ ಪೆರಾಡಿ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News