ಕಾರು ಢಿಕ್ಕಿ: ಪಾದಚಾರಿ ಸಾವು
Update: 2016-07-01 18:34 GMT
ಸುಳ್ಯ, ಜು.1: ಜಾಲ್ಸೂರಿನ ನಡುವಡ್ಕ ಎಂಬಲ್ಲಿ ಕಾರೊಂದು ಪಾದಚಾರಿಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ, ಪಾದಚಾರಿ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.
ಮಡಿಕೇರಿಯಿಂದ ಮಂಗಳೂರಿಗೆ ಹೋಗುವ ಕಾರೊಂದು ನಡುವಡ್ಕ ಎಂಬಲ್ಲಿ ಕುಂಬ್ರ ಪರ್ಪುಂಜದ ಆಯಿಷಾ (35) ರಿಗೆ ರಸ್ತೆ ದಾಟುತ್ತಿರುವ ವೇಳೆ ಢಿಕ್ಕಿ ಹೊಡೆಯಿತು. ಪರಿಣಾಮ ಆಯಿಷಾ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದರು. ಈ ಬಗ್ಗೆ ಸುಳ್ಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.