‘ಪ್ರಜಾಪ್ರಭುತ್ವದ ಅಸ್ತಿತ್ವದಲ್ಲಿ ಮಾಧ್ಯಮದ ಪಾತ್ರ ಪ್ರಮುಖ’

Update: 2016-07-01 19:00 GMT

ಮಂಗಳೂರು,ಜು.1: ದೇಶದ ಪ್ರಜಾ ಪ್ರಭುತ್ವ ವ್ಯವಸ್ಥೆ ಅಸ್ತಿತ್ವದಲ್ಲಿ ರಬೇಕಾದರೆ ಮಾಧ್ಯಮ ಕ್ಷೇತ್ರದ ಪಾತ್ರ ಬಹು ಪ್ರಮುಖ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ ಅಭಿ ಪ್ರಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತ ಆಶ್ರಯ ದಲ್ಲಿ ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಜರಗಿದ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಜೀವನದ ಕಾವಲುಗಾರ ನಾಗಿ ಮಾಧ್ಯಮ ಕಾರ್ಯನಿರ್ವಹಿಸು ತ್ತಿದ್ದು, ಸಮಾಜವು ಸರಿಯಾದ ವ್ಯವಸ್ಥೆ ಯಲ್ಲಿ ಸಾಗುವಲ್ಲಿ ಸಹಕಾರಿಯಾಗಿದೆ. ಸಮಾಜದಲ್ಲಿರುವವರು ತಾವು ಸಾಗಲು ಸುಲಭವಾದ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುವುದು ಸಹಜ. ಆದರೆ ಈ ಮಾಧ್ಯಮವೆಂಬ ಕಾವಲುಗಾರ ಸುಲಭ ದಾರಿಯಲ್ಲಿ ಕಂಡುಬರುವ ಅಡೆತಡೆ, ಅವ್ಯವಸ್ಥೆಗಳನ್ನು ಬಯಲು ಮಾಡುವ ಮೂಲಕ ಪ್ರಜಾಪ್ರಭುತ್ವ ಜೀವಂತವಾಗಿರುವಲ್ಲಿ ಸಹಕರಿಸುತ್ತದೆ. ಸರ್ವಾಧಿಕಾರಿ ಧೋರಣೆ ಹೊಂದಿರುವ ಈಜಿಪ್ಟ್‌ನಂತಹ ರಾಷ್ಟ್ರಗಳಲ್ಲಿ ಮಾಧ್ಯಮಗಳಿಗೆ ಯಾವುದೇ ಮಹತ್ವವಿಲ್ಲ. ಇದರಿಂದ ಸಾರ್ವಜನಿಕರು ವ್ಯವಸ್ಥೆಯ ಆಕ್ರೋಶವನ್ನು ವ್ಯಕ್ತಪಡಿಸಲು ಸಾಧ್ಯವಾಗದೆ, ಹತಾಶೆಯು ರಕ್ತಪಾತದ ರೂಪದಲ್ಲಿ ಹೊರಬರುತ್ತದೆ. ಆದರೆ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಮಾಧ್ಯಮಗಳ ಸಮರ್ಪಕ ಕಾರ್ಯನಿರ್ವಹಣೆಯಿಂದ ಇಂತಹ ರಕ್ತಪಾತಕ್ಕೆ ಅವಕಾಶವಿಲ್ಲ.

ಬದಲಾಗಿ ಹತಾಶೆ, ಅತೃಪ್ತಿ, ಪ್ರತಿಭಟನೆ, ವಿರೋಧದ ಮೂಲಕ ವ್ಯಕ್ತವಾಗಿ ಸಮಾಜ ದಲ್ಲಿ ಸುಧಾರಣೆಗೆ ಕಾರಣ ವಾಗುತ್ತದೆ ಎಂದು ಮಾಧ್ಯಮದ ಪಾತ್ರವನ್ನು ಚಂದ್ರಶೇಖರ್ ವಿಶ್ಲೇಷಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಮಾತನಾಡಿ, ಕೌಟುಂಬಿಕ ಸಂಬಂಧ ಗಟ್ಟಿಗೊಳಿಸುವ ಕುರಿತಂತೆ ಇಂದಿನ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದರು. ‘ಸಾಮಾಜಿಕ ಜಾಲತಾಣಗಳು, ಮಾಧ್ಯಮ ಹಾಗೂ ಸಮಾಜ’ ಎಂಬ ವಿಷಯದಲ್ಲಿ ರೋಶನಿ ನಿಲಯದ ಡೀನ್ ಜೋಸ್ಲಿನ್ ಲೋಬೊ ಉಪನ್ಯಾಸ ನೀಡಿದರು. ಪತ್ರಿಕಾ ದಿನಾಚರಣೆಯ ಅಂಗವಾಗಿ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾ ಛಾಯಾಚಿತ್ರ ಗ್ರಾಹಕರ ವಿವಿಧ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಯಿತು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಗದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಅಧ್ಯಕ್ಷತೆ ವಹಿಸಿದ್ದರು. ಪ್ರ. ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಪತ್ರಿಕಾ ಭವನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News