ಕಾಸರಗೋಡು: ವಿವಿಧೆಡೆ ದಾಳಿ; ಅಕ್ರಮ ಮದ್ಯ, ಪಾನ್ ಮಸಾಲ ವಶಕ್ಕೆ

Update: 2016-07-02 09:45 GMT

ಕಾಸರಗೋಡು, ಜು.2: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, 40 ಲೀಟರ್ ಮದ್ಯ ಮತ್ತು 6,560 ಪ್ಯಾಕೆಟ್ ನಿಷೇಧಿತ ಪಾನ್ ಮಸಾಲ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ. ಅಕ್ರಮ ಮದ್ಯವನ್ನು ಉದುಮದಲ್ಲಿ ಶಶಿಧರನ್, ಮೀಂಜದಲ್ಲಿ ಎಂ. ಸುಧಾಕರನ್, ಅದೂರಿನಲ್ಲಿ ಆನಂದ ರಾವ್ ಎಂಬವರು ಮಾರಾಟ ಮಾಡುತ್ತಿದ್ದು, ಮೂವರನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News