ಬಲ್ಮಠ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಭಾರತ್ ಸೇವಾದಳದ ಶಾಖೆ ಉದ್ಘಾಟನೆ

Update: 2016-07-02 14:52 GMT

ಮಂಗಳೂರು,ಜು.2:ಬಲ್ಮಠ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಭಾರತ ಸೇವಾದಳದ ಶಾಖೆಯನ್ನು ಮಂಗಳೂರು ರೋಟರಿ ಕ್ಲಬ್ ನ ಅಧ್ಯಕ್ಷ ಇಲ್ಯಾಸ್ ಸಾಂಕ್ಟಿಸ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಂದು ಶೇ.60 ರಷ್ಟು ಯುವ ಜನತೆ ಇದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಇದ್ದಾರೆ. ಅವರೇ ದೇಶದ ಮುಂದಿನ ಆಸ್ತಿ. ನಾವು ಸಮಾಜದಿಂದ ಗಳಿಸಿರುವಂತದ್ದನ್ನು ನಾವು ಸಮಾಜಕ್ಕೆ ಅರ್ಪಿಸುವಂತಹ ಗುಣ ಇರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜೆ.ಆರ್. ಲೋಬೊ, ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಶಿಸ್ತು ಅಗತ್ಯ. ಕಲಿಯುವುದರ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಕ್ರೀಯಾಶೀಲರಾಗಬೇಕು. ವಿದ್ಯಾರ್ಥಿನಿಯರು ಕ್ರಿಯಾಶೀಲರಾದರೆ ಉನ್ನತ ಸ್ಥಾನಕ್ಕೆ ಏರಬಹುದು. ಬರುವಂತಹ ಅವಕಾಶಗಳನ್ನು ಬಳಸಿಕೊಂಡು ಆಕರ್ಷಕ ಕೇಂದ್ರ ಬಿಂದುಗಳಾಗಲು ಪ್ರಯತ್ನಿಸಿ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಸೇವಾದಳ ಅಧ್ಯಕ್ಷ ಪ್ರಭಾಕರ ಶ್ರೀಯಾನ್ ಅವರು ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ಕಾಲೇಜ್ ಪ್ರಿನ್ಸಿಪಾಲ್ ಜೋಸೆಫ್, ಪ್ರಾಧ್ಯಾಪಕ ಚೆರಿಯನ್, ಸೇವಾದಳ ತಾಲೂಕು ಕಾರ್ಯದರ್ಶಿ ಉದಯ ಕುಂದರ್, ಜಿಲ್ಲಾ ಸಂಘಟಕ ಟಿ.ಎಸ್. ಮಂಜೇಗೌಡ, ಸದಸ್ಯರಾದ ದುರ್ಗಾಪ್ರಸಾದ್, ಸುನಿಲ್ ದೇವಾಡಿಗ, ಶೋಭಾ ಕೇಶವ, ಕೃತಿನ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News