ತೆಂಗಿನಕಾಯಿಗೆ ಬೆಂಬಲ ಬೆಲೆ ನಿಗದಿ

Update: 2016-07-02 15:53 GMT

ಉಡುಪಿ, ಜು.2: ಎಫ್‌ಎಕ್ಯೂ ಗುಣಮಟ್ಟದ ಸುಲಿದ ತೆಂಗಿನ ಕಾಯಿಗಳನ್ನು ಪ್ರತಿ ಕ್ವಿಂಟಾಲ್‌ಗೆ 1,600ರೂ. ಬೆಂಬಲ ಬೆಲೆ ದರದಲ್ಲಿ ಖರೀದಿಸಿ ರೈತರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸುವಂತೆ ಕರ್ನಾಟಕ ಸರಕಾರ ಆದೇಶ ಹೊರಡಿಸಿದೆ.

ಎಫ್‌ಎಕ್ಯೂ ಗುಣಮಟ್ಟದ ತಾಂತ್ರಿಕ ಅರ್ಹತೆಗಳು ಈ ಕೆಳಗಿನಂತಿದೆ.

  • ತೆಂಗಿನಕಾಯಿಗಳನ್ನು ಹೂಬಿಟ್ಟ 11ರಿಂದ 12 ತಿಂಗಳಲ್ಲಿ ಕೊಯ್ಲು ಮಾಡಿರಬೇಕು.
  • ಸುಲಿದ ತೆಂಗಿನಕಾಯಿಗಳು ಕಡು ಕಂದು ಬಣ್ಣದ್ದಾಗಿರಬೇಕು.
  • ಬಲಿತ ಸುಲಿದ ತೆಂಗಿನಕಾಯಿಗಳು ಕಪ್ಪುಬಣ್ಣದ ಕವಚದೊಂದಿಗೆ ಮೂರು ಉದ್ದ ಗೆರೆಗಳನ್ನು ಹೊಂದಿರಬೇಕು.
  • ತೆಂಗಿನಕಾಯಿಯ ಮೂರು ಕಣ್ಣುಗಳು ಗಟ್ಟಿಯಾಗಿದ್ದು ಕಂದು ಅಥವಾ ಕಪ್ಪು ಬಣ್ಣದ್ದಾಗಿರಬೇಕು.
  • ಸುಲಿದ ತೆಂಗಿನ ಕಾಯಿಗಳು ಜುಟ್ಟನ್ನು ಹೊಂದಿರಬೇಕು ಈ ಕಾಯಿಲೆಗಳ ತೂಕದ ಶೇ.2ನ್ನು ಜುಟ್ಟಿನ ತೂಕವಾಗಿ ಪರಿಗಣಿಸಿ ಕಡಿತಗೊಳಿಸಲಾಗುವುದು.

ಸುಲಿದ ತೆಂಗಿನ ಕಾಯಿಗಳ ಖರೀದಿಯನ್ನು ಜು.4ರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಹಾಪ್‌ಕಾಮ್ಸ್ ಖರೀದಿಸಲಿದ್ದು, ರೈತರು ಇದರ ಪ್ರಯೋಜನ ಪಡೆಯಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕ ನಿರ್ದೇಶಕರು ಜಿಲ್ಲಾ ಹಾಪ್‌ಕಾಮ್ಸ್, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ: 0824-2495008, 0824-44256008 ಅಥವಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಡುಪಿ:0820-2520032, ಕುಂದಾಪುರ:08254-230412, ಕಾರ್ಕಳ:08258-230961, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಜಿಪಂ ಉಡುಪಿ:0820-2522837, ಕುಂದಾಪುರ:08254-230813, ಕಾರ್ಕಳ:08258-230288 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News