ಈದ್: ಅಹಿತಕರ ಘಟನೆಗಳ ತಡೆಗೆ ಸೂಚನೆ

Update: 2016-07-03 18:42 GMT

 ಕಾಸರಗೋಡು, ಜು.3: ಈದುಲ್ ಫಿತ್ರ್‌ನ್ನು ಶಾಂತಿಯುತವಾಗಿ ಆಚರಿ ಸಲು ಅನುಕೂಲವಾಗುವಂತೆ ಅಹಿತ ಕರ ಘಟನೆಗಳನ್ನು ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
  ಈ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ವ ಪಕ್ಷ ಸಭೆ ತೀರ್ಮಾನ ತೆಗೆದು ಕೊಂಡಿದ್ದು, ಸಾರ್ವಜನಿಕರಿಗೆ ಆರು ನಿರ್ದೇಶನಗಳನ್ನು ನೀಡಿದೆ.
 * ಯಾವುದೇ ಕಾರಣಕ್ಕೆ ಹಬ್ಬ ಆಚರಣೆಯೂ ಅತಿರೇಕಕ್ಕೆ ಹೋಗ ಬಾರದು.
  * ಸಾರ್ವಜನಿಕ ಸ್ಥಳಗಳಲ್ಲಿ ತೋರಣ, ಬ್ಯಾನರ್ ಅಳವಡಿಕೆಗೆ ನಿಯಂತ್ರಣ ಹೇರಲಾಗಿದ್ದು, ಹಬ್ಬ ಕಳೆದ ಕೂಡಲೇ ಅವುಗಳನ್ನು ತೆರವು ಗೊಳಿಸಬೇಕು.
 * ಪೊಲೀಸ್ ಆದೇಶ ಉಲ್ಲಂಘಿ ಸುವವರ ವಿರುದ್ಧ ಕಠಿಣ ಕ್ರಮ ತೆಗೆದು ಕೊಳ್ಳಲಾಗುವುದು.
   * ಹಬ್ಬದಂಗವಾಗಿ ಜನನಿಬಿಡ ಸ್ಥಳಗಳಲ್ಲಿ, ಪೇಟೆಗಳಲ್ಲಿ ಪಟಾಕಿ ಸಿಡಿ ಸುವುದಕ್ಕೆ ನಿರ್ಬಂಧ ಹೇರಲಾಗಿದೆ.
  * ಯಾವುದೇ ಕಾರಣಕ್ಕೂ ಬೈಕ್ ರ್ಯಾಲಿ, ರೈಡಿಂಗ್ ನಡೆಸುವಂತಿಲ್ಲ. * ಸಂಚಾರ ದಟ್ಟಣೆ ಉಂಟಾಗುವ ಕಾಸರಗೋಡು, ಕಾಞಂಗಾಡ್‌ಗಳಂ ತಹ ನಗರಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯಾಗದಂತೆ ವಾಹನ ಪಾರ್ಕ್ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News