ಜಕ್ರಿಬೆಟ್ಟು: ರಸ್ತೆ ದುರಸ್ತಿಗೆ ಆಗ್ರಹಿಸಿ ವಾಹನ ಸಂಚಾರಕ್ಕೆ ತಡೆ

Update: 2016-07-03 18:42 GMT

ಬಂಟ್ವಾಳ, ಜು.3: ಸಂಚಾರಕ್ಕೆ ಅಡಚಣೆ ಯಾಗಿರುವ, ಹೊಂಡಮಯವಾಗಿರುವ ರಸ್ತೆಯ ದುರಸ್ತಿಗೆ ಕ್ರಮ ಕೈಗೊ ಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ವಾಹನಗಳನ್ನು ತಡೆದು ಹಠಾತ್ ಪ್ರತಿಭಟನೆಗೆ ಮುಂದಾದ ಘಟನೆ ಪುರಸಭಾ ವ್ಯಾಪ್ತಿಯ ಜಕ್ರಿಬೆಟ್ಟುವಿನಲ್ಲಿ ರವಿವಾರ ನಡೆದಿದೆ.

ಜಕ್ರಿಬೆಟ್ಟು-ಅಗ್ರಹಾರ ರಸ್ತೆ ಕಳೆದ 6 ವರ್ಷಗಳಿಂದ ಡಾಮರು ಕಾಣದೆ ನಾದುರಸ್ತಿಯಲ್ಲಿದ್ದು, ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಇದೀಗ ಒಳಚರಂಡಿ ಯೋಜನೆ ಮತ್ತು ಎರಡನೆ ಹಂತದ ಕುಡಿಯುವ ನೀರಿನ ಯೋಜನೆ ಗಾಗಿ ರಸ್ತೆಯನ್ನು ಅಗೆದಿರುವುದು ಹೊಂಡಗಳಾಗಲು ಕಾರಣ ಎಂದು ದೂರಲಾಗಿದೆ. ಈ ರಸ್ತೆಯ ದುರಸ್ತಿಗೆ ಒತ್ತಾಯಿಸಿ ಪುರಸಭೆಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿಂದು ನಾಗರಿಕರು ಪ್ರತಿಭಟನೆಗೆ ಮುಂದಾಗಿದ್ದರು.
ಸ್ಥಳೀಯ ಪ್ರಮುಖರಾದ ಕಾಂತಪ್ಪಪೂಜಾರಿ, ಮುಹಮ್ಮದ್ ಹುಸೈನ್, ಪ್ರಕಾಶ್ ಸಫಲ್ಯ, ಗುರುದತ್ತ ನಾಯಕ್ ಜಕ್ರಿಬೆಟ್ಟು, ಹೇಮಂತ್ ಜಕ್ರಿಬೆಟ್ಟು, ಶಿವರಾಮ ಶೆಟ್ಟಿ, ವಸಂತ ಭಂಡಾರಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿ ರಸ್ತೆ ತಡೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News