ಕೋಣಾಜೆ: ಮನೆಯ ಹಿಂಬಾಗದಲ್ಲಿ ಸುರಂಗ ಪತ್ತೆ

Update: 2016-07-04 07:30 GMT

ಕೋಣಾಜೆ, ಜು.4: ಪುಳಿಂಚಾಡಿ ಸದಾಶಿವ ಎಂಬವರ ಮನೆಯ ಹಿಂಬದಿಯಲ್ಲಿ ಬೃಹತ್ ಗಾತ್ರದ ಸುರಂಗವೊಂದು ಪತ್ತೆಯಾಗಿದೆ. ಬೆಳಗ್ಗೆ ಭಾರೀ ಶಬ್ಧ ಕೇಳಿಸಿದ ಹಿನ್ನೆಲೆ ಸದಾಶಿವ ಅವರ ಪತ್ನಿ ಪ್ರಭಾವತಿ ಮನೆಯ ಹಿಂಬದಿ ನೋಡಿದಾಗ ಭೂಕುಸಿತವಾಗಿರುವ ಬಗ್ಗೆ ಅರಿವಾಗಿದೆ. ಮನೆಯಲ್ಲಿ ಪ್ರಭಾವತಿ ಒಬ್ಬರೇ ಇದ್ದರು. 

ಸ್ಥಳೀಯರು ಜೆಸಿಬಿ ತರಿಸಿ ಇದನ್ನು ಸರಿಪಡಿಸುವ ವೇಳೆ ಭೂಕುಸಿತದಿಂದ ಸುರಂಗ ಮಾರ್ಗವೊಂದು ಪತ್ತೆಯಾಗಿದೆ. ಈ ಮನೆ ಅಪಾಯದ ಅಂಚಿನಲ್ಲಿದ್ದು, ಅಲ್ಲದೆ ಅಕ್ಕಪಕ್ಕದಲ್ಲಿನ ಮನೆಗಳಿಗೂ ಹಾನಿಯಾಗುವ ಭೀತಿ ಉಂಟಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News