ಮಿಲ್ಲತ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಿಂದ ರಮಝಾನ್ ಕಿಟ್ ವಿತರಣೆ

Update: 2016-07-04 17:56 GMT

ಮಂಗಳೂರು, ಜು.4: ಮಿಲ್ಲತ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಿಂದ ಇತ್ತೀಚೆಗೆ ತೀರಾ ಬಡತನದಲ್ಲಿರುವ 75 ಕುಟುಂಬವನ್ನು ಗುರುತಿಸಿ ರಮಝಾನ್ ಕಿಟ್‌ಗಳನ್ನು ವಿತರಿಸಲಾಯಿತು.

ಮಿಲ್ಲತ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯು ತನ್ನ ಬೆಳ್ಳಿ ಹಬ್ಬವನ್ನು ಇತ್ತೀಚೆಗೆ ಆಚರಿಸಿದ್ದು ಅದರ ಸವಿನೆನಪಿಗಾಗಿ 75 ಕುಟುಂಬಗಳಿಗೆ ರಮಝಾನ್ ಕಿಟ್ ವಿತರಿಸಲಾಯಿತು.

ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಬಿ.ಇಬ್ರಾಹೀಂ, ನಿರ್ದೇಶಕರಾದ ನಿಸ್ಸಾರ್ ಅಹ್ಮದ್, ಅಬ್ದುಸ್ಸಲಾಂ, ಪುಷ್ಪರಾಜ್, ಕಾರ್ಯದರ್ಶಿ ಶೆರಿನ್ ಬಾನು ಮತ್ತು ಸಿಬ್ಬಂದಿವರ್ಗದವರ ಸಮ್ಮುಖದಲ್ಲಿ ರಮಜಾನ್ ಕಿಟ್ ವಿತರಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News