‘ಶ್ರೀರಾಮ ಸಂಘಟನೆ’ ಹೆಸರಲ್ಲಿ ಹಫ್ತಾ ವಸೂಲಿ: ಐವರು ಪೊಲೀಸರ ವಶಕ್ಕೆ

Update: 2016-07-07 12:08 GMT

ಮೂಡುಬಿದಿರೆ, ಜು.7: 'ಶ್ರೀರಾಮ ಸಂಘಟನೆ'ಯ ಹೆಸರಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದ ಐವರು ಯುವಕರನ್ನು ಮೂಡುಬಿದಿರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಯುವಕರು ಪಡುಬಿದ್ರೆ ಮೂಲದವರು ಎಂದು ತಿಳಿದುಬಂದಿದೆ.

ಬಂಧಿತರು ಮೂಡುಬಿದಿರೆಯ ಅಂಗಡಿ, ಮಳಿಗೆಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದರು. ಈ ಪೈಕಿ ಒಂದು ಮಳಿಗೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News