ವಿಧಾನ ಪರಿಷತ್ತಿನಲ್ಲಿ ಗುಣ ಮಟ್ಟದ ಚರ್ಚೆ ನಡೆಸಲು ಪ್ರಯತ್ನ: ಐವನ್ ಡಿಸೋಜ

Update: 2016-07-07 15:51 GMT

ಮಂಗಳೂರು,ಜು.6:ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಗುಣಮಟ್ಟದ ಚರ್ಚೆ ನಡೆಸಲು ಪ್ರಯತ್ನಿಸುವುದಾಗಿ ಸರಕಾರದ ನೂತನ ಮುಖ್ಯ ಸಚೇತಕನಾಗಿ ನೇಮಕಗೊಂಡ ಐವನ್ ಡಿ ಸೋಜ ತಿಳಿಸಿದರು.

ಅವರು ಇಂದು ನಗರದ ಮನಪಾ ಕಚೇರಿಯಲ್ಲಿಂದು ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದರು.

ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಆರೋಗ್ಯಕರ ಚರ್ಚೆನಡೆಯಬೇಕಾಗಿದೆ. ಕಾಲಕಾಲಕ್ಕೆ ಅಗತ್ಯವಾದ ಕಾನೂನು ರಚನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸದನದ ಕಲಾಪ ಗುಣಮಟ್ಟದಿಂದ ಕೂಡಿರಬೇಕಾಗುತ್ತದೆ.ಈ ನೆಲೆಯಲ್ಲಿ ಸದನವನ್ನು ಮುಖ್ಯ ಸಚೇತಕನಾಗಿ ಮುನ್ನಡೆಸಲು ಪ್ರಯತ್ನಿಸುವುದಾಗಿ ಐವನ್ ತಿಳಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಪ್ರಥಮ ಆದ್ಯತೆ:- ಸರಕಾರದ ಮುಖ್ಯ ಸಚೇತಕನಾಗಿ ಜಿಲ್ಲೆಯ ಕುಡಿಯುವ ನೀರು,ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತನೆಹೊಂದಿದ್ದು ಈ ಬಗ್ಗೆ ಕಾರ್ಯಯೋಜನೆ ರೂಪಿಸಲು ರಾಜ್ಯದ ಸಚಿವರು,ಶಾಸಕರ ಸಹಕಾರದಿಂದ ಪ್ರಯತ್ನಿಸುವುದಾಗಿ ಐವನ್ ಡಿ ಸೋಜ ತಿಳಿಸಿದರು. ಜಿಲ್ಲೆಯಲ್ಲಿ ಕಳೆದ ಬೇಸಗೆಯಲ್ಲಿ ಕುಡಿಯುವ ನೀರಿನ ಗಂಭೀರವಾದ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಕರಾವಳಿಗೆ 2ಸಾವಿರ ಕೋಟಿ ರೂಪಾಯಿಯ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಸರಕಾರದ ಚಿಂತನೆ ಇದೆ ಈ ಬಗ್ಗೆ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಪ್ರಯತ್ನಿಸುವುದಾಗಿ ಐವನ್ ಡಿ ಸೋಜ ತಿಳಿಸಿದರು.

 ಕೇಂದ್ರ ಸರಕಾರದಿಂದ ರಾಜ್ಯದ ಕಡೆಗಣನೆ:- ಕೇಂದ್ರ ಸರಕಾರ ಸಂಪುಟ ಪುನಾರಚನೆ ಮಾಡಿದ ಸಂದರ್ಭದಲ್ಲಿ ರಾಜ್ಯದಿಂದ ಆಯ್ಕೆಯಾದ 17 ಮಂದಿ ಬಿಜೆಪಿ ಸಂಸದರಿದ್ದರೂ ಕೇಂದ್ರದ ಸಂಪುಟದಲ್ಲಿ ಪ್ರಮುಖ ಖಾತೆ ನೀಡದೆ ರಾಜ್ಯವನ್ನು ಕಡೆಗಣಿಸಿದೆ. ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯಕ್ಕೆ ಇದರಿಂದ ಮಾರಕವಾಗಲಿದೆ.ಈ ಹಿಂದೆ ಪ್ರಮುಖ ಖಾತೆ (ಕಾನೂನು )ಹೊಂದಿದ್ದ ಡಿ.ವಿ.ಸದಾನಂದ ಗೌಡರ ಖಾತೆಯನ್ನು ಕಿತ್ತುಕೊಂಡು ಅವರಿಗೆ ಸಾಂಖಿಕ ಮತ್ತು ಯೋಜನೆ ಅನುಷ್ಠಾನ ಖಾತೆಯನ್ನು ನೀಡಲಾಗಿದೆ ಎಂದು ಐವನ್ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ನ ಉಸ್ತುವಾರಿ ಅಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್,ಮನಪಾ ಸದಸ್ಯೆ ಅಪ್ಪಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News